ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರ್ಡೂರು: ಬಾಲಕಿಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ

Last Updated 3 ಜೂನ್ 2011, 9:35 IST
ಅಕ್ಷರ ಗಾತ್ರ

ಉಡುಪಿ: ತಾಲ್ಲೂಕಿನ ಪೆರ್ಡೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪೆರ್ಡೂರು, ಬೈರಂಪಳ್ಳಿ, ಬೆಳ್ಳರ್ಪಾಡಿ, 41ನೇ ಶಿರೂರು ಮತ್ತು ಕುಕ್ಕೆಹಳ್ಳಿ ಗ್ರಾಮಸ್ಥರು ಪೆರ್ಡೂರು ದೇವಸ್ಥಾನದಿಂದ ಬಸ್ ನಿಲ್ದಾಣದ ತನಕ ಗುರುವಾರ ಬೆಳಿಗ್ಗೆ ಮೆರವಣಿಗೆ ನಡೆಸಿ ಬಳಿಕ ಬಸ್ ನಿಲ್ದಾಣದಲ್ಲಿ  ಪ್ರತಿಭಟನಾ ಸಭೆ ನಡೆಸಿದರು. ಲೈಂಗಿಕ ಕಿರುಕುಳ ತಡೆಯುವ ಸಲುವಾಗಿ ಪೋಷಕರು ವಹಿಸಬೇಕಾದ ಮುಂಜಾಗ್ರತೆ ಬಗ್ಗೆ ತಿಳಿಹೇಳಲಾಯಿತು.

ಪೆರ್ಡೂರು ಪ್ರೌಢಶಾಲೆಯ ಬಳಿಯ ನಿವಾಸಿ ಇಕ್ಬಾಲ್ ಯಾನೆ ಮೋನು ಎನ್ನುವಾತ ಇತ್ತೀಚಿಗೆ ಆಮೀಷವೊಡ್ಡಿ 10ನೇ ತರಗತಿ ಕಲಿಯುತ್ತಿದ್ದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸ ಗಿದ್ದಾನೆ. ಪ್ರಮುಖ ಆರೋಪಿ ಇಕ್ಬಾಲ್‌ನನ್ನು ಬಂಧಿಸಿದರೂ, ಇತರೆ ಆರೋಪಿಗಳಾದ ಅಬ್ದುಲ್ ರೆಹಮಾನ್, ಫಿರೋಜ್, ಉಮೇಶ್ ಶೆಟ್ಟಿ, ಸುರೇಶ್ ಮರಕಾಲನನ್ನು ಈವರೆಗೂ ಬಂಧಿಸಿಲ್ಲ.
 
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಆರೋಪಿಗಳ ಬಂಧನ ಏಕಾಗಿಲ್ಲ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. `ಅತ್ಯಾಚಾರ ಘಟನೆಗಳಿಂದ ಹೆತ್ತವರು, ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ~ ಎಂಬ ಮಾತು ಪ್ರತಿಭಟನೆ ವೇಳೆ ಕೇಳಿಬಂತು.  ಬಳಿಕ ಸಭೆಯಲ್ಲಿ ಮಾತನಾಡಿದ ಬಿಜೆಪಿ ಸ್ಥಾಯಿ ಸಮಿತಿಯ ಕಾರ್ಯದರ್ಶಿ ಪುರು ಷೋತ್ತಮ್ ಐತಾಳ್, `ಅತ್ಯಾಚಾರವೆಸಗಿದ ಆರೋಪಿಯ ಬಗ್ಗೆ ಅನೇಕ ದೂರುಗಳಿವೆ. ಈತನ ಸಹಚರರೂ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಅವರೆಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

`ಆಮೀಷ ಒಡ್ಡಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಮಕ್ಕಳಿಗೆ ತಿಳಿಹೇಳುವ ಕಾರ್ಯ ಹೆತ್ತವರಿಂದ ನಡೆಯ ಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿ ಸಬೇಕು~ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ರಾಮಕುಲಾಲ್, ಬಿಜೆಪಿ ಸ್ಥಾನೀಯ ಸಮಿತಿ ಮುಖಂಡ ಸುಧಾಕರ ಶೆಟ್ಟಿ, ಸ್ಥಾಯೀ ಸಮಿತಿಯ ಅಧ್ಯಕ್ಷ ದಿವಾಕರ ಶೆಟ್ಟಿ, ಬೈರಂಪಳ್ಳಿ ಪಂಚಾಯಿತಿ ಅಧ್ಯಕ್ಷ ಜಯಾನಂದ ಹೆಗ್ಡೆ, ಸುರೇಶ್ ಸೇರ್ವೇಗಾರ್, ಪ್ರವೀಣ್ ಶೆಟ್ಟಿ, ಸುರೇಶ್ ಮೆಂಡನ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT