ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಜ್ಞಾ ವಿಧಿ ಪ್ರಹಸನ !

ಅಕ್ಷರ ಗಾತ್ರ

ಜನ ಪ್ರತಿನಿಧಿಯಾಗಿ ಕೋಟಿ ಕೋಟಿ ಖರ್ಚು ಮಾಡಿ (ಕೆಲವು ಅಪವಾದಗಳನ್ನು ಹೊರತು ಪಡಿಸಿ) ಚುನಾಯಿತರಾಗಿ ಬರುವ ಶಾಸಕರು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕಾಲಕ್ಕೆ ಘನತೆ, ಗಾಂಭೀರ್ಯದ ನಡವಳಿಕೆಯನ್ನು ಪ್ರದರ್ಶಿಸದೇ, ನಿಯಮದ ಪ್ರಕಾರ `ಭಗವಂತ' ಅಥವಾ `ಸತ್ಯ ನಿಷ್ಠೆಯ' ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸುವ ಬದಲು ಯಾವುದೋ ದೇವರ ಹೆಸರಿನಲ್ಲಿ, ನದಿ, ವ್ಯಕ್ತಿಗಳ ಹೆಸರಿನಲ್ಲಿ, ತಾಯಿ ತಂದೆ ಹೆಸರಿನಲ್ಲಿ - ಹೀಗೆ ತಮಗೆ ತಿಳಿದಂತೆ ಪ್ರತಿಜ್ಞೆ ಸ್ವೀಕರಿಸುವುದು ಒಂದು `ಪ್ರಹಸನವಾಗಿ' ಮಾರ್ಪಟ್ಟು ಹಾಸ್ಯಾಸ್ಪದ ಸನ್ನಿವೇಶ ಸೃಷ್ಟಿಗೆ ಕಾರಣವಾಗುತ್ತದೆ.

ಈ ಕುರಿತು ಕೆಲವು ಶಾಸಕರೇ ಆಕ್ಷೇಪವೆತ್ತಿದರೂ ಇತರರು ನಿರ್ಲಕ್ಷಿಸಿದರು ಎನ್ನುವುದು ಇನ್ನೂ ದೊಡ್ಡ ದುರಂತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT