ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಿಂದ ಕೊಚ್ಚಿವರೆಗೆ ಸೌರ ಚಾಲಿತ ವಾಹನದಲ್ಲಿ ಪಯಣ

Last Updated 7 ಫೆಬ್ರುವರಿ 2012, 5:00 IST
ಅಕ್ಷರ ಗಾತ್ರ

ಬೆಂಗಳೂರು: ಅಣ್ಣಾ ಹಜಾರೆ ಅವರ ನೇತೃತ್ವದ ಭ್ರಷ್ಟಾಚಾರ ವಿರುದ್ಧದ ಚಳವಳಿಗೆ ಬೆಂಬಲ ಸೂಚಿಸಿ, ಜನ ಜಾಗೃತಿ ಉಂಟುಮಾಡಲು ಬೆಂಗಳೂರಿನಿಂದ ಭ್ರಷ್ಟಾಚಾರ ವಿರುದ್ಧ ಭಾರತದ ಸ್ವಯಂಸೇವಕರ ತಂಡ ಸೌರ ಚಾಲಿತ ವಾಹನದಲ್ಲಿ ಬೆಂಗಳೂರಿನಿಂದ ಕೊಚ್ಚಿವರೆಗೆ ಪಯಣ ಬೆಳೆಸಲಿದೆ.

`ಭ್ರಷ್ಟಾಚಾರ ನಿಲ್ಲಿಸಿ ಹಾಗೂ ಪರಿಸರ ಮಾಲಿನ್ಯ ತಪ್ಪಿಸಿ~ ಎಂಬ ಸಂದೇಶದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ~ ಎಂದು ಸೊಮವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕರ್ತ ಚಂದ್ರಕಾಂತ ಮಾಹಿತಿ ನೀಡಿದರು.

`ತಂಡವು ಫೆಬ್ರುವರಿ 6 ರಂದು ಬೆಂಗಳೂರಿನಿಂದ ಹೊರಟು ತಮಿಳುನಾಡು ಹಾಗೂ ಕೇರಳದ ಸುಮಾರು 200 ಗ್ರಾಮಗಳನ್ನು ತಲುಪುವ ನಿರೀಕ್ಷೆಯಿದೆ.  ತಂಡವು ಸುಮಾರು 1,000 ಕಿಮೀ ದೂರದ ರಸ್ತೆ ಪ್ರಯಾಣ ಮಾಡಲಿದೆ~ ಎಂದು ತಿಳಿಸಿದರು.

`ಸರ್ಕಾರ ಮತ್ತು ರಾಜ್ಯಪಾಲರು ಲೋಕಾಯುಕ್ತ ನೇಮಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಇವರಿಬ್ಬರ ಕಿತ್ತಾಟದಲ್ಲಿ ಜನರು ಬಡವಾಗುತ್ತಿದ್ದಾರೆ. ಲೋಕಾಯುಕ್ತ ನೇಮಕದಲ್ಲಿ ವಿನಾ ಕಾರಣ ಮೀನಮೇಷವನ್ನು ಎಣಿಸಲಾಗುತ್ತಿದೆ~ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.`ಲೋಕಾಯುಕ್ತಕ್ಕೆ ಮುಖ್ಯಸ್ಥನನ್ನೇ ನೇಮಿಸದೆ, ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇಂತಹ ಕಾರ್ಯಗಳಿಂದ ಜನರೆಲ್ಲ ರೋಸಿ ಹೋಗುತ್ತಾರೆ. ತಕ್ಷಣ ಲೋಕಾಯುಕ್ತರನ್ನು ನೇಮಿಸಬೇಕು~ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT