ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗಳಿಗೆ ಮನವಿಗಳ ಮಹಾಪೂರ

Last Updated 30 ಆಗಸ್ಟ್ 2011, 6:25 IST
ಅಕ್ಷರ ಗಾತ್ರ

ಯಾದಗಿರಿ: ಇಡೀ ದಿನ ಜಿಲ್ಲೆಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಮನವಿಗಳ ಮಹಾಪೂರವೇ ಹರಿದು ಬಂತು. ವಿವಿಧ ಸಂಘಟನೆಗಳು, ಪಕ್ಷದ ಮುಖಂಡರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ನಗರಸಭೆ: ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿಕೊಡುವಂತೆ ನಗರಸಭೆ ಅಧ್ಯಕ್ಷೆ ನಾಗರತ್ನಾ ಅನಪೂರ ಮನವಿ ಮಾಡಿದರು.

ನಗರಸಭೆ ಹೊಸ ಕಟ್ಟಡಕ್ಕೆ ರೂ. 3 ಕೋಟಿ, ಹಳ್ಳಕ್ಕೆ ಸೇತುವೆ ನಿರ್ಮಿಸಲು ರೂ.5 ಕೋಟಿ, ಜಿಲ್ಲಾ ಸಾಂಸ್ಕೃತಿಕ ಭವನಕ್ಕೆ ರೂ.1 ಕೋಟಿ, ಈಜುಗೊಳ ನಿರ್ಮಾಣಕ್ಕೆ ರೂ. 3 ಕೋಟಿ, ತರಕಾರಿ ಮಾರುಕಟ್ಟೆ ಅಭಿವೃದ್ಧಿಗೆ ರೂ.1 ಕೋಟಿ, ಬೆಟ್ಟದ ಅಭಿವೃದ್ಧಿಗೆ ವಿಶೇಷ ಅನುದಾನ, ವಾಜಪೇಯಿ ನಗರ ನಿವೇಶನ ಯೋಜನೆಯಡಿ ಸುಮಾರು 1200 ಫಲಾನುಭವಿಗಳಿಗೆ ನಿವೇಶ ನೀಡಲು 15 ಎಕರೆ ಜಮೀನು ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಪದಾಧಿಕಾರಿಗಳು:ಬಿಜೆಪಿ ಗುರುಮಠಕಲ್ ಮತಕ್ಷೇತ್ರ ಘಟಕದ ಪದಾಧಿಕಾರಿಗಳು ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವಂತೆ ಮನವಿ ಸಲ್ಲಿಸಿದರು. ಕ್ಷೇತ್ರದ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕೈಗೊಂಬೆಗಳಾಗಿದ್ದು, ಸಮರ್ಥ ನಾಯಕತ್ವಕ್ಕಾಗಿ ಪಕ್ಷದ ಮುಖಂಡ ವೆಂಕಟರೆಡ್ಡಿ ಮುದ್ನಾಳರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ಮನವಿ ಮಾಡಿದರು.

ಗುರುಮಠಕಲ್ ಮತಕ್ಷೇತ್ರ ಘಟಕದ ಅಧ್ಯಕ್ಷ ವೆಂಕಟರಾಮರೆಡ್ಡಿ ವಡವಟ್, ಪ್ರಧಾನ ಕಾರ್ಯದರ್ಶಿ ಶರಣುಗೌಡ ಬಾಡಿಯಾಳ, ವೆಂಕಟಪ್ಪ ಅವಂಗಪೂರ, ಸಿದ್ಧಪ್ಪ ಹೊಟ್ಟಿ ಮುಂತಾದವರು ಮನವಿ ಮಾಡಿದರು.
ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಿಜೆಪಿ ಪದಾಧಿಕಾರಿಗಳಾದ ಸಿದ್ಧಾರೆಡ್ಡಿ ಬಲಕಲ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಸದಸ್ಯ ಬಸವರಾಜ ಖಂಡ್ರೆ, ಬಾಬು ದೋಖಾ, ಭೀಮು ಕುರಕುಂದಿ ಮುಂತಾದವರು ಮನವಿ ಸಲ್ಲಿಸಿದರು.

ಕರವೇ ಜಿಲ್ಲಾ ಘಟಕ: ಜಿಲ್ಲೆಯಾಗಿ ಎರಡು ವರ್ಷ ಆಗುತ್ತ ಬಂದಿದ್ದರೂ, ಇದುವರೆಗೆ ಜಿಲ್ಲೆಯ ಅಭಿವೃದ್ಧಿ ಆಗಿಲ್ಲ. ಆಡಳಿತಸೌಧ ನಿರ್ಮಾಣವಾಗಿಲ್ಲ. ರೂ.300 ಕೋಟಿ ಘೋಷಣೆ ಆಗಿದ್ದರೂ, ಹಣ ಬಿಡುಗಡೆ ಆಗಿಲ್ಲ. ಕೂಡಲೇ ಅನುದಾನ ಬಿಡುಗಡೆ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ ಮಾಡಬೇಕು ಎಂದು ಕರವೇ ಜಿಲ್ಲಾ ಘಟಕ ಮನವಿ ಸಲ್ಲಿಸಿದೆ.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಕರಬಸಪ್ಪ ಬಿರಾಳ, ವೆಂಕಟೇಶ ಮಿಲ್ಟ್ರಿ, ಅರ್ಜುನ ಪವಾರ್, ಕಿಶೋರ್ ಅನಪೂರ, ಅಪ್ಪುಗೌಡ ಮುಂತಾದವರು ಮನವಿ ಸಲ್ಲಿಸಿದರು.

ಕರವೇ ಉ.ಕ. ಘಟಕ: ಕರವೇ (ಪ್ರವೀಣ ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ವತಿಯಿಂದ 371 ನೇ ಕಲಂಗೆ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಲಾಯಿತು.

ಹೈದರಾಬಾದ ಕರ್ನಾಟಕ ಎಂಬ ಹೆಸರನ್ನು ತೆಗೆದು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಬೇಕು. ಮುಂದಿನ ಅಧಿವೇಶನವನ್ನು ಯಾದಗಿರಿ ಜಿಲ್ಲೆಯಲ್ಲಿ ಮಾಡಬೇಕು. ಶಹಾಪುರ ಅನ್ನು ಉಪವಿಭಾಗ ಕೇಂದ್ರವನ್ನಾಗಿ ಮಾಡಬೇಕು. ಕಕ್ಕೇರಾ, ಹುಣಸಗಿ, ಕೆಂಭಾವಿ, ವಡಗೇರಾ ಗ್ರಾಮಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು. ಕರವೇ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ, ಶರಣು ಇಟಗಿ, ದೇವು ಪಾಟೀಲ, ಸೇರಿದಂತೆ ಹಲವಾರು ಕಾರ್ಯಕರ್ತರು ಮನವಿ ಸಲ್ಲಿಸಿದರು.

ಜೈಕರ್ನಾಟಕ ರಕ್ಷಣಾ ವೇದಿಕೆ: ಸಂಘಟನೆಯ ವತಿಯಿಂದ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಕೆಲಸ ಮಾಡಲು ಆಡಳಿತ ಸೌಧ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಕ್ರೀಡಾಂಗಣದ ಕಾಮಗಾರಿ, ನೂತನ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಸಂಘಟನೆ ರಾಘು ಗುತ್ತೇದಾರ, ಪ್ರವೀಣರಾಜ ಬುರನೋರ್, ರಾಹುಲ್ ಗಣಪೂರಕರ್, ನವೀನ್ ತಾಳಿಕೋಟ್, ದೇವರಾಜ ಪಾಟೀಲ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT