ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪ್ಪನ್‌ಪೇಟೆ: ಬಂಗಾರಪ್ಪ ಶ್ರದ್ಧಾಂಜಲಿ ಸಭೆ

Last Updated 23 ಜನವರಿ 2012, 8:15 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಯಾವುದೇ ವ್ಯಕ್ತಿ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಿಡಿದೇಳುವುದು ಸಹಜ. ಹಾಗೆಯೇ, ನಮ್ಮ ಅಪ್ಪಾಜಿ ಅವರು ಸಹ ಅಧಿಕಾರಕ್ಕಾಗಿ ಹಾತೊರೆದವರಲ್ಲ. ಆದರೆ, ಇಂದು ಬಡವರ, ದೀನ ದಲಿತರ ಏಳಿಗೆಗಾಗಿ ಹಾಗೂ ಕ್ಷೇತ್ರದ ಜನತೆಗಾಗಿ ಕೊನೆ ಉಸಿರಿರುವವರೆಗೂ ಇಟ್ಟಂತಹ ಕಾಳಜಿಯೇ ಜನತೆಯ ಪ್ರೀತಿ ಗಳಿಕೆಗೆ ಸಾಧ್ಯವಾಗಿದೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

 ಹಿರಿಯ ಸಮಾಜವಾದಿ ಚಿಂತಕ ಅಗಲಿದ ನಾಯಕ ಎಸ್. ಬಂಗಾರಪ್ಪ ಅವರಿಗೆ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ  ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶ್ರೀಮಂತ ಹಾಗೂ ಬಡವರ ನಡುವಿನ ವ್ಯತ್ಯಾಸ ಅರಿತು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸುವ ಸಜ್ಜನಿಕೆ ಅವರಲ್ಲಿ ಇತ್ತು. ಅವರ ಅಡಿಯಲ್ಲಿ ಬೆಳೆದ ನಾನು ತಂದೆಯವರ ಆಶಯದಂತೆ ಅವರ ಹೆಸರಿಗೆ ಕಳಂಕ ತಾರದ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗುವುದಾಗಿ ತಿಳಿಸಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಅನೆ ನಡೆದ್ದೇ ಹಾದಿ ಎಂಬಂತೆ ಅಪರೂಪ ವ್ಯಕ್ತಿತ್ವದ ರಾಜಕಾರಣಿ ಅಗಿದ್ದರು ಎಂದರು.

ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ಪಕ್ಷಕ್ಕಾಗಿ ನಾನಲ್ಲ. ಪಕ್ಷ ನನಗಾಗಿ ಎಂಬ ಅವರ ನೇರ ನಡೆ-ನುಡಿಯ ರಾಜಕಾರಣವೇ  ಈ ಮಟ್ಟದ ನಾಯಕರಾಗಲು ಸಾಧ್ಯವಾಯಿತು. ಅಧಿಕಾರ ಇದ್ದಾಗ ಜಾರಿಗೊಳಿಸಿದ ಯೋಜನೆಗಳು ಅವರ ದೂರದೃಷ್ಟಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದರು.

ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, ಜಿಲ್ಲೆಯಲ್ಲಿ ತುಂಗಾ ಏತ ನೀರಾವರಿಗೆ ಅನುಮೋದನೆ ಮಾಡಿದ  ಮೊದಲ ಮುಖ್ಯಮಂತ್ರಿ ಎಂದರು.

ಡಾ.ಜಿ.ಡಿ. ನಾರಾಯಣಪ್ಪ ಮಾತನಾಡಿ, ಬಂಗಾರಪ್ಪ ಅವರು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಹಿಂದುಳಿದ ವರ್ಗದ ಶಕ್ತಿಯಾಗಿ ಹೊರಹೊಮ್ಮಿದ್ದರು.ಜನಸಾಮಾನ್ಯನಲ್ಲೂ ನಾಯಕತ್ವ ಗುಣ ಬೆಳಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಬಿ.ಪಿ. ರಾಮಚಂದ್ರ ಮಾತನಾಡಿ, ತಮ್ಮದೇ ವ್ಯಕ್ತಿತ್ವದ ಧಾಟಿಯಲ್ಲಿ ರಾಜಕೀಯದಲ್ಲಿ ಛಾಪು ಮೂಡಿಸಿದ ಈ ನಾಯಕರ ಹೆಸರು ಮುಂದಿನ ದಿನದಲ್ಲಿ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಆಗಬಾರದು ಎಂದರು.

ಜಿ.ಪಂ. ಸದಸ್ಯ ಕಲಗೋಡು ರತ್ನಾಕರ ಪ್ರಾಸ್ತವಿಕ ಮಾತನಾಡಿದರು. ಮಾಜಿ ಸದಸ್ಯರಾದ ಪಟಮಕ್ಕಿ ಮಹಬಲೇಶ್, ಬಿ. ತೇಜಪ್ಪ, ಜೆಡಿಎಸ್ ಮುಖಂಡರಾದ ಮದನ್ ಕುಮಾರ್, ಪ.ರಾ. ಶ್ರೀನಿವಾಸ್, ಪವಿತ್ರಾ ರಾಮಯ್ಯ, ಶ್ರೀಕಾಂತ್, ಎಂ.ಬಿ. ಲಕ್ಷಣ್‌ಗೌಡ, ಚಾಬುಸಾಬ್, ಡಿ.ಕೆ. ನಾರಾಯಣ್‌ರಾವ್, ಕೆ.ವೈ. ಷಣ್ಮುಖಪ್ಪ, ಅಬ್ಬಿ ಮಲ್ಲೇಶಪ್ಪ, ಅವಡೆ ಶಿವಪ್ಪ, ಪದ್ಮಾ ಸುರೇಶ, ಎನ್. ವರ್ತೇಶ, ಪಿ. ರಮೇಶ, ವಿಲಿಯಂ ಭದ್ರಾವತಿ ಹಾಗೂ  ಅಮೀರ್‌ಹಂಜ ಸೇರಿದಂತೆ ವಿವಿಧ ಪಕ್ಷದ ಮುಖಂಡರು ನುಡಿ ನಮನದ ಮೂಲಕ ತಮ್ಮ ನಾಯಕನಿಗೆ ಪುಷ್ಪಾಂಜಲಿ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT