ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಣ್ಣ ಕಾಂಗ್ರೆಸ್ ಬಿಡಲ್ಲ

Last Updated 17 ಏಪ್ರಿಲ್ 2013, 20:28 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ಕ್ಷೇತ್ರದಲ್ಲಿ ಟಿಕೆಟ್ ದೊರೆಯದ್ದರಿಂದ ಬೇಸತ್ತು ಕಾಂಗ್ರೆಸ್‌ಗೆ ವಿದಾಯ ಹೇಳಲು ಮುಂದಾಗಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಸಂಸದ ಎಚ್.ವಿಶ್ವನಾಥ್ ಅವರೊಂದಿಗೆ ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ರೇವಣ್ಣ, `ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದಲ್ಲೇ ಬೆಳೆದು ಬಂದವನು. ಇಲ್ಲಿಯೇ ಉಳಿಯುತ್ತೇನೆ. ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ' ಎಂದು ಘೋಷಿಸಿದರು.`ನಾನು ಪಕ್ಷಕ್ಕಾಗಿ ಡಿದಿದ್ದೇನೆ. ಪಕ್ಷವೂ ನನಗೆ ಎಲ್ಲವನ್ನೂ ನೀಡಿದೆ. ಮುಂದೆಯೂ ಪಕ್ಷದಿಂದ ನನಗೆ ಸೂಕ್ತ ಸ್ಥಾನಮಾನ ದೊರೆಯುತ್ತದೆ ಎಂಬ ವಿಶ್ವಾಸ ಇದೆ. ಪಕ್ಷದ ಜೊತೆಗಿನ ಸಂಬಂಧವನ್ನು ಕಳಚಿಕೊಳ್ಳಲು ನಾನು ಬಯಸುವುದಿಲ್ಲ' ಎಂದರು.

ಷರೀಫ್‌ರಿಂದ ಅನ್ಯಾಯ: `ಪಕ್ಷದ ರಾಜ್ಯ ನಾಯಕರ ಮೇಲೆ ನನಗೆ ಅಸಮಾಧಾನ ಇಲ್ಲ. ಅವರಿಂದ ನನಗೆ ತೊಂದರೆಯೂ ಆಗಿಲ್ಲ. ಮೇಲಿನ ಹಂತದಲ್ಲಿ ಕೆಲವು ವ್ಯತ್ಯಾಸಗಳು ಆಗಿರಬಹುದು. ಆದರೆ, ಹೆಬ್ಬಾಳ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯದಲ್ಲಿ ಪಕ್ಷದ ಹಿರಿಯ ಮುಖಂಡ ಸಿ.ಕೆ.ಜಾಫರ್ ಷರೀಫ್ ನನಗೆ ಅನ್ಯಾಯ ಮಾಡಿದ್ದಾರೆ' ಎಂದು ಆರೋಪಿಸಿದರು.

`ಷರೀಫ್ ಹಿರಿಯ ನಾಯಕರು. ಪಕ್ಷಕ್ಕಾಗಿ ದುಡಿದ ನನ್ನಂತಹವರಿಗೆ ಟಿಕೆಟ್ ಕೇಳಬೇಕಿತ್ತು. ಆದರೆ, ಮೊಮ್ಮಗನ ಮೇಲಿನ ವ್ಯಾಮೋಹದಿಂದ ಅಬ್ದುಲ್ ರೆಹಮಾನ್ ಷರೀಫ್‌ಗೆ ಟಿಕೆಟ್ ನೀಡುವಂತೆ ಒತ್ತಡ ತಂದರು.  ರೆಹಮಾನ್‌ಗೆ ರಾಜಕೀಯ ಅನುಭವ ಇಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ನನ್ನಂತಹವನಿಗೆ ಮೋಸ ಮಾಡಿದರು' ಎಂದು ಅಸಮಾಧಾನ ವ್ಯಕ್ತಪಡಿಸಿದರು. `ಸಿದ್ದರಾಮಯ್ಯ ಅವರಿಂದ ನನಗೆ ಅನ್ಯಾಯ ಆಗಿಲ್ಲ. ಅವರು ನನ್ನ ಪರವಾಗಿ ಸಾಕಷ್ಟು ಒತ್ತಡ ತಂದಿದ್ದರು. ಆದರೆ, ಷರೀಫ್ ಅವರು ಪಟ್ಟುಬಿಡದ ಕಾರಣ ಟಿಕೆಟ್ ದೊರಯಲಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT