ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಬ್ಯಾಂಕ್: ಶೀಘ್ರದಲ್ಲೇ ಜೆನ್ ನೆಕ್ಸ್ಟ್ ಶಾಖೆ ಆರಂಭ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು: ಯುವ ಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ಆಯ್ದ 15 ಮಹಾ ನಗರಗಳಲ್ಲಿ ಮುಂದಿನ ತಲೆಮಾರಿನ `ಜೆನ್ ನೆಕ್ಸ್ಟ್~  ಶಾಖೆಗಳನ್ನು ತೆರೆಯಲು ವಿಜಯ ಬ್ಯಾಂಕ್ ನಿರ್ಧರಿಸಿದೆ.

ಕೆಲವು ಖಾಸಗಿ ಬಾಂಕ್‌ಗಳು ಈಗಾಗಲೇ ಇಂತಹ ವ್ಯವಸ್ಥೆ ರೂಪಿಸಿವೆ. ನಗದು ಪಡೆಯಲು ಎಟಿಎಂ ಬಳಸುತ್ತಿರುವಂತೆಯೇ ಚೆಕ್ ಮತ್ತು ನಗದು ಜಮಾ ಮಾಡಲೂ `ಜೆನ್ ನೆಕ್ಸ್ಟ್~  ಶಾಖೆಗಳು ನೆರವಾಗಲಿವೆ.

ಆದರೆ ಈ ಯಂತ್ರಗಳು ಬಹಳ ದುಬಾರಿ.  ಬಳಕೆದಾರರಿಗೆ ಅನುಕೂಲ ಸ್ಥಳ ಆಯ್ದುಕೊಂಡು ಶಾಖೆ ತೆರೆಯಬೇಕಿದೆ. ಸೂಕ್ತ ಸ್ಥಳಗಳಿಗಾಗಿ ಪರಿಶೀಲನೆ ನಡೆದಿದೆ ಎಂದು ಬ್ಯಾಂಕ್ ಅಧ್ಯಕ್ಷಎಚ್.ಎಸ್.ಉಪೇಂದ್ರ ಕಾಮತ್ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT