ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಮ ಸ್ಮರಣೆಗೆ ವಿದ್ಯೋತ್ಸವ

Last Updated 21 ಜನವರಿ 2011, 14:10 IST
ಅಕ್ಷರ ಗಾತ್ರ

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ದಿ. ಎಂ.ಸಿ. ಶಿವಾನಂದ ಶರ್ಮ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಭಾನುವಾರ ನಡೆಯಲಿದೆ. 1911ರ ಜನವರಿ 22ರಂದು ಟಿ ನರಸೀಪುರ ತಾಲೂಕಿನ ಸಣ್ಣ ಹಳ್ಳಿಯಲ್ಲಿ ಜನಿಸಿದ ಶಿವಾನಂದ ಶರ್ಮ ಅವರು ಶಿಕ್ಷಣ ರಂಗಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಸ್ಮರಿಸಿ ‘ವಿದ್ಯೋತ್ಸವ’ ಸ್ಮರಣ ಸಂಚಿಕೆ ಹೊರತರಲಾಗುತ್ತದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಶಾಸಕ ಬಿ.ಎನ್. ವಿಜಯಕುಮಾರ್, ಐಎಎಸ್ ಅಧಿಕಾರಿಗಳಾದ ನಾಗಾಂಬಿಕಾ ದೇವಿ, ವಿ. ರಶ್ಮಿ, ಹೆಚ್‌ಎಎಲ್ ಅಧ್ಯಕ್ಷ ಅಶೋಕ್ ನಾಯಕ್, ಕುಮಾರನ್ ಚಿಲ್ಡ್ರನ್ಸ್ ಹೋಂ ನಿರ್ದೇಶಕಿ ಮೀನಾಕ್ಷಿ ಬಾಲಕೃಷ್ಣ, ಐಐಎಂನ ಪ್ರೊ. ನಯನತಾರಾ ಮತ್ತು ಪ್ರೊ. ಮಾಲತಿ ಸೋಮಯ್ಯ, ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟಿ ತಾರಾ, ನೃತ್ಯ ಕಲಾವಿದೆ ಲಕ್ಷ್ಮಿ ಗೋಪಾಲಸ್ವಾಮಿ, ಗಾಯಕಿ ಎಂ.ಡಿ. ಪಲ್ಲವಿ ಅರುಣ್, ಲೇಖಕಿ ಮಮತಾ ಸಾಗರ್, ಚಿತ್ರ ಕಲಾವಿದೆ ಸಿ ವಿ ಸುಪ್ರಿಯಾ ಮತ್ತಿತರರನ್ನು ಸನ್ಮಾನಿಸಲಾಗುವುದು.

ವಿಧಾನ ಪರಿಷತ್‌ನ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ, ಆರ್‌ವಿ ಸಂಸ್ಥೆ ಅಧ್ಯಕ್ಷ ಡಾ. ಎಂ. ಕೆ. ಪಾಂಡುರಂಗ ಶೆಟ್ಟಿ, ಪ್ರೊ. ಎಂ. ಆರ್ ಹೊಳ್ಳ, ತುಮಕೂರು ವಿವಿ ಕುಲಪತಿ ಡಾ. ಎಸ್ ಸಿ ಶರ್ಮಾ, ಎಂಎಲ್‌ಸಿ ಎಸ್ ಆರ್ ಲೀಲಾ, ಕೆ. ನಂಜುಂಡಸ್ವಾಮಿ ಪಾಲ್ಗೊಳ್ಳಲಿದಾರೆ.

ಸ್ಥಳ: ಮಂಗಳ ಮಂಟಪ, ಎನ್‌ಎಂಕೆಆರ್‌ವಿ ಕಾಲೇಜು, ಜಯನಗರ 3ನೇ ಬ್ಲಾಕ್. ಬೆಳಿಗ್ಗೆ 10.30. ಮಾಹಿತಿಗೆ: ಎ.ವಿ.ಎಸ್. ಮೂರ್ತಿ (ಗೌರವ ಕಾರ್ಯದರ್ಶಿ), 98450 72215.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT