ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸ್ತೇದಾರ್ ಮನೆಗೆ ಲೋಕಾಯುಕ್ತ ದಾಳಿ

ಕಡೂರು ತಾಲ್ಲೂಕು ಕಚೇರಿಯ ಆರ್‌ಆರ್‌ಟಿ ವಿಭಾಗ
Last Updated 20 ಡಿಸೆಂಬರ್ 2012, 9:52 IST
ಅಕ್ಷರ ಗಾತ್ರ

ಕಡೂರು: ಸಾರ್ವಜನಿಕರ ದೂರಿನ ಮೇರೆಗೆ ಚಿಕ್ಕಮಗಳೂರು ಲೋಕಾಯುಕ್ತರು ತಾಲ್ಲೂಕು ಕಚೇರಿಯ ಆರ್‌ಆರ್‌ಟಿ ವಿಭಾಗದ ಶಿರಸ್ತೇದಾರ್ ವಿಮ್ಸ ರೆಜಾರಿಯ ಅವರ ಮನೆಗೆ ಬುಧವಾರ ಬೆಳಗ್ಗೆ ದಾಳಿ ನಡೆಸಿದರು.

1.36 ಲಕ್ಷ ರೂ. ನಗದು, 300 ಗ್ರಾಂ ಚಿನ್ನ, ನಾಲ್ಕು ಮನೆ, ಒಂದು ಕಾರು, ಎರಡು ಬೈಕ್, ಮೂರು ಎಕರೆ ಭೂಮಿ ಸೇರಿದಂತೆ ಇತರೆ ಪತ್ರಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಿಕೊಂಡಿರುವುದಾಗಿ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜ ತಿಳಿಸಿದರು.

ಸೋಮೇಶ್ವರ ನಗರ, ವೆಂಕಟೇಶ್ವರ ನಗರ, ವಿದ್ಯಾನಗರ, ವೇದಾ ನಗರ ಸೇರಿದಂತೆ ನಾಲ್ಕು ಬಡಾವಣೆಗಳಲ್ಲಿ ನಾಲ್ಕು ಮನೆ. ಪಿರ್ತಾರ್ಜಿತ ಸೇರಿದಂತೆ, ಹೆಂಡತಿ ಹೆಸರಿಗೆ ಒಂದು ನಿವೇಶನ, ಎಸ್‌ಬಿಎಂ ಬ್ಯಾಂಕ್ ಖಾತೆಯಲ್ಲಿ 4 ಲಕ್ಷ ನಗದು, ಎಮ್ಮೆದೊಡ್ಡಿ ಪ್ರದೇಶದಲ್ಲಿ 3.20 ಗುಂಟೆ ಅಡಿಕೆ ತೋಟ, ವಿದೇಶಿ ಮೂಲದ ನಾಲ್ಕು ಬಾಟಲ್ ಮದ್ಯ ವಶಪಡಿಸಿಕೊಂಡಿದ್ದು ಅಂದಾಜು ಮೌಲ್ಯ 90 ಲಕ್ಷ ರೂ. ಎಂದು ಮಾಹಿತಿ ನೀಡಿದರು.

ಮನೆಯಲ್ಲಿ 10 ಲೀಟರ್ ಮದ್ಯ ಇರುವುದರಿಂದ ಅಬಕಾರಿ ಅಧಿಕಾರಿಗಳಿಗೂ ದೂರು ನೀಡಿದ್ದು ಮುಂದಿನ ಕ್ರಮಕ್ಕೆ ಒತ್ತಾಯಿಸಿದ್ದೇವೆ ಎಂದರು.

ದಾಳಿಯಲ್ಲಿ ಇನ್‌ಸ್ಪೆಕ್ಟರ್ ಗುರುರಾಜ್, ವಿನಯ್, ಸಿಬ್ಬಂದಿ ಯೋಗೇಶ್, ರಾಜಕುಮಾರ್, ಓಂಕಾರಪ್ಪ, ಮಹೇಶ್ವರ್, ಪ್ರಸನ್ನ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT