ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದೆಡೆಗೆ ಯುವ ಸಮಾಜ: ಸಂತಸ

Last Updated 4 ಜುಲೈ 2013, 19:47 IST
ಅಕ್ಷರ ಗಾತ್ರ

ಬೆಂಗಳೂರು: `ಮೌಲ್ಯಾಧಾರಿತ ಸಂಗೀತ ಶಿಕ್ಷಣಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ' ಎಂದು ಸಂಗೀತತಜ್ಞ ಎನ್.ಎಸ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪರ್ಕಸ್ಸಿವ್ ಆರ್ಟ್ಸ್ ಸೆಂಟರ್ ಬೆಂಗಳೂರು ಗಾಯನ ಸಮಾಜದಲ್ಲಿ ಗುರುವಾರ ಆಯೋಜಿಸಿದ್ದ 32ನೇ ವಾರ್ಷಿಕ ತಾಳವಾದ್ಯೋತ್ಸವ ಮತ್ತು ಸಂಗೀತ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಶಿಕ್ಷಣ ವಾಣಿಜ್ಯೀಕರಣಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲೂ ಸಂಗೀತ ತನ್ನದೇ ಸ್ಥಾನವನ್ನು ಉಳಿಸಿಕೊಂಡಿದೆ. ಸಂಗೀತಾಸಕ್ತರನ್ನು ವಿವಿಧ ಮಜಲುಗಳಲ್ಲಿ ಸೆಳೆಯಲು ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ' ಎಂದು ತಿಳಿಸಿದರು.

`ಶಾಸ್ತ್ರೀಯ ಮತ್ತು ಆಧುನಿಕ ಪ್ರಕಾರಗಳನ್ನು ಒಳಗೊಂಡು ಹುಟ್ಟುತ್ತಿರುವ  ಸೃಜನಶೀಲ ಪಂಥದಿಂದ ಸಂಗೀತ ಲೋಕದ ಸಾಮ್ರಾಜ್ಯ ವಿಸ್ತರಣೆಯಾಗುತ್ತಿದೆ. ಯುವ ಸಮಾಜವು ಸಂಗೀತದೆಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಸಂತಸದ ವಿಚಾರ' ಎಂದು ಹರ್ಷ ವ್ಯಕ್ತಪಡಿಸಿದರು.

`ಇಂಟರ್‌ನೆಟ್‌ನಂತಹ ಮಾಧ್ಯಮವು ವಿವಿಧ ಪ್ರಕಾರದ ಸಂಗೀತದ ಕುರಿತು ಭರಪೂರ ಮಾಹಿತಿಯನ್ನು ಒದಗಿಸುತ್ತಿದೆ. ಮಾಹಿತಿ ಜತೆಯಲ್ಲಿ ನಿರಂತರ ಅಭ್ಯಾಸ ಮತ್ತು ಗುರುಬಲವಿದ್ದಾಗ ಮಾತ್ರ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯ' ಎಂದು  ಹೇಳಿದರು.
ಮೂಕಾಂಬಿಕ ತಾಳವಾದ್ಯ ಸಂಗೀತ ಕಲಾಶಾಲೆ ಅವರಿಂದ `ಲಯ ಮಿಲನ' ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT