ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲ: ಹಾವೇರಿಗೆ 3ನೇ ಸ್ಥಾನ

Last Updated 15 ಜುಲೈ 2012, 8:15 IST
ಅಕ್ಷರ ಗಾತ್ರ

ಹಾವೇರಿ: `ರಾಜ್ಯ ಸರ್ಕಾರ ಜಾರಿಗೊಳಿ ಸಿರುವ ನಾಗರೀಕ ಸೇವೆಗಳ ಖಾತರಿ ಯೋಜನೆ `ಸಕಾಲ~ದ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ~ ಎಂದು ಅಪರ ಜಿಲ್ಲಾಧಿಕಾರಿ ಜಿ.ಜಗದೀಶ ಹೇಳಿದರು.

ತಾಲ್ಲೂಕಿನ ದೇವಗಿರಿ ಗ್ರಾಮದಲ್ಲಿ ವಾರ್ತಾ ಇಲಾಖೆ ಗುರುವಾರ ಆಯೋಜಿಸಿದ್ದ `ಸಕಾಲ~ ಬೀದಿನಾಟಕ ಅಭಿಯಾನ ಸಮಾರೋಪ ಸಮಾರಂಭ ದಲ್ಲಿ ಪಾಲ್ಗೊಂಡು  ಮಾತನಾಡಿದರು.

ಪ್ರಸಕ್ತ ವರ್ಷ ಮಾರ್ಚ್ ತಿಂಗಳಲ್ಲಿ ಸಕಾಲ ಯೋಜನೆ ಜಾರಿಯಾಗಿದ್ದು, ಯೋಜನೆ ಅನುಷ್ಠಾನದಲ್ಲಿ ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಉತ್ತಮ ಸ್ಥಾನ ಲಭಿಸಿದೆ. ಸಕಾಲ ಯೋಜನೆ ಅಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2ನೇ ಸ್ಥಾನ, ಕಂದಾಯ ಇಲಾಖೆ 4ನೇ ಸ್ಥಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 7ನೇ ಸ್ಥಾನ ಲಭಿಸಿದೆ ಎಂದರು.

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನದ ಲಿವೆ. ದಕ್ಷಿಣ ಕನ್ನಡ ಜಿಲ್ಲೆ 4ನೇ ಸ್ಥಾನ ದಲ್ಲಿದೆ. ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರಜ್ಞಾವಂತಿಕೆಯನ್ನು ಮೆಚ್ಚಿದ ಅವರು, ಸಕಾಲ ಯೋಜನೆ ವ್ಯಾಪ್ತಿ ಯಲ್ಲಿನ ಪ್ರಕರಣಗಳ ಅಧಿಕಾರಿಗಳು ವಿಲೇವಾರಿ ಮಾಡುತ್ತಿದ್ದು, ನಿಗದಿತ ಅವಧಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ ಎಂದರು.

ಯಾವುದೇ ಇಲಾಖೆಯ ಅಧಿಕಾರಿಗಳಿಂದ ತಕ್ಷಣಕ್ಕೆ ಸೇವೆ ದೊರೆಯದಿದ್ದಲ್ಲಿ ಸಾರ್ವಜನಿಕರು ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಸಕಾಲಕ್ಕೆ ಸೇವೆಗಳನ್ನು ಪಡೆದುಕೊಳ್ಳ ಬೇಕು ಎಂದು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಮಾತನಾಡಿ, ಸಕಾಲ ಯೋಜನೆ ಬಗ್ಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಲು ಸರ್ಕಾರ ವಾರ್ತಾ ಇಲಾಖೆ ಮೂಲಕ ರಾಜ್ಯಾ ದ್ಯಂತ ಎಲ್ಲ ಜಿಲ್ಲೆಯಲ್ಲಿ ಸುಮಾರು 54 ಬೀದಿನಾಟಕ ಪ್ರದರ್ಶನ ಆಯೋಜಿಸಿತ್ತು.
 
ಮೇ 16 ರಂದು ಆರಂಭ ಗೊಂಡಿದ್ದ ಬೀದಿನಾಟಕ ಪ್ರದರ್ಶನ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸುವ್ಯವಸ್ಥಿತವಾಗಿ ಪ್ರದರ್ಶನ ಕಂಡು ಮುಕ್ತಾಯ ವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿ ಸತೀಶಕುಮಾರ ಹಾಜರಿದ್ದರು. ದೇವಗಿರಿ ಗ್ರಾ.ಪಂ. ಸದಸ್ಯ ಬಸವರಾಜ ಬೂದಣ್ಣನವರ ಅಧ್ಯಕ್ಷತೆ ವಹಿಸಿದ್ದರು. ವಸಂತ ಮಡ್ಲೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT