ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಹಿತ್ಯದಿಂದ ಜೀವನದಲ್ಲಿ ಬದಲಾವಣೆ'

Last Updated 22 ಏಪ್ರಿಲ್ 2013, 5:38 IST
ಅಕ್ಷರ ಗಾತ್ರ

ಬಳ್ಳಾರಿ: ಸಾಹಿತ್ಯದಿಂದ ವ್ಯಕ್ತಿಯ ವೈಯಕ್ತಿಕ ಜೀವನ ಸಾಕಷ್ಟು ಬದಲಾ ವಣೆ ಕಾಣುತ್ತದೆ. ಬರವಣಿಗೆಯಿಂದ ನೆಮ್ಮದಿ ದೊರೆಯುತ್ತದೆ ಎಂದು ಲೇಖಕಿ, ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿ ಅಭಿಪ್ರಾಯ ಪಟ್ಟರು.

ನಗರದ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಭಾನು ವಾರ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಏರ್ಪಡಿಸಿದ್ದ `ಸಾಹಿತಿಯೊಂದಿಗೆ ಸಂವಾದ'  ಕಾರ್ಯಕ್ರಮದಲ್ಲಿ ಅವರು ತಮ್ಮ ಬದುಕು-ಬರಹ ಕುರಿತು ಮಾತನಾಡಿದರು.

`ಬಾಲ್ಯದಲ್ಲೇ ನನ್ನ ತಂದೆ ಸಾಹಿತ್ಯದ ರುಚಿ ಉಣಬಡಿಸಿದರು. ಕೃಷಿ ವಿಜ್ಞಾನಿಯಾಗಿದ್ದ ಅವರು ಇಂಗ್ಲಿಷ್, ಸ್ಪ್ಯಾನಿಶ್, ಲ್ಯಾಟಿನ್, ಹಿಂದಿ, ತೆಲುಗು ಭಾಷೆಗಳನ್ನು ಬಲ್ಲವರಾಗಿದ್ದರಲ್ಲದೆ, ಕನ್ನಡ ಸಾಹಿತ್ಯ ಹಾಗೂ ವಿಶ್ವ ಶ್ರೇಷ್ಠ ಸಾಹಿತ್ಯವನ್ನೂ ಪರಿಚಯಿಸಿದರು. ಅವರ ಪ್ರೋತ್ಸಾಹವೇ ನಾನು ಲೇಖಕಿಯಾಗಿ ಹೊರಹೊಮ್ಮಲು ಪ್ರೇರಣೆಯಾಯಿತು' ಎಂದು ಅವರು ತಿಳಿಸಿದರು.

ಅಪ್ಪ ಕೃಷಿ ವಿಜ್ಞಾನಿ ಆಗಿದ್ದರಿಂದ ಸಸ್ಯ ಜಗತ್ತಿನ ಮೇಲೆ ವಿಶೇಷ ಪ್ರೇಮ ಹೊಂದಿದ್ದರು. ಆಯುರ್ವೇದದತ್ತ ಆಸಕ್ತರಾಗಿದ್ದ ಅವರು, ಬಾಲ್ಯದಲ್ಲೇ ಆಯುರ್ವೇದದ ಬಗ್ಗೆ ಒಲವು ಮೂಡಿ ಸಿದರು. ಅದಕ್ಕೆಂದೇ ನನ್ನನ್ನು ಆಯು ರ್ವೇದ ವೈದ್ಯೆಯಾಗಿ ರೂಪಿಸಿದರು ಎಂದ ಅವರು, ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಒಲವು ಇರುತ್ತದೆ. ಆದ್ದರಿಂದ ವೈದ್ಯಕೀಯ ಸಾಹಿತ್ಯ ಬಹಳಷ್ಟು ಜನಪ್ರಿಯವಾಗಿದೆ ಎಂದರು.

`ಅನಾರೋಗ್ಯದಿಂದ ಬಳಳಿದಾಗ ವೈದ್ಯರ ಬಳಿ ಹೋಗುತ್ತೇವೆ. ಅವರು ನಮ್ಮ ದೈಹಿಕ, ಮನಸಿಕ ಪರಿಸ್ಥಿತಿ ಗಮನಿಸಿ ಸೂಕ್ತ ಔಷಧಿ ನೀಡುತ್ತಾರೆ. ಇದರ ಜತೆಗೆ ಅವರು ಔಷಧಿಯೊಂದಿಗೆ ಉತ್ತಮವಾದ ವೈದ್ಯಕೀಯ ಪುಸ್ತಕ ವನ್ನೂ ಓದುವಂತೆ ಸೂಚಿಸಬೇಕು. ವೈದ್ಯಕೀಯ ಸಾಹಿತ್ಯ ಓದುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹು ದಾಗಿದೆ ಎಂದು ಅವರು ಹೇಳಿದರು.

`ಖ್ಯಾತ ಸಾಹಿತಿಗಳಾಗಿರುವ ಎ.ಎನ್. ಮೂರ್ತಿರಾವ್, ನಿಟ್ಟೂರು ಶ್ರೀನಿವಾಸ ರಾಯರು, ಕೆ.ಎಸ್. ನರಸಿಂಹಸ್ವಾಮಿ, `ಇಗೋ ಕನ್ನಡ'ದ ಡಾ.ಜಿ.ವೆಂಕಟಸುಬ್ಬಯ್ಯ ಅವರನ್ನು ಸಂದರ್ಶಿಸಿ, ಅವರ ಬದುಕಿನ ವಿವಿಧ ಘಟ್ಟಗಳನ್ನು ಅವಲೋಕಿಸಿ, ಅವರ ಅನುಭವಗಳನ್ನು ತಿಳಿದಿದ್ದೇನೆ. ಅವರಿಂದ ಜೀವನ ಮೌಲ್ಯಗಳನ್ನು ಅರಿತಿದ್ದೇನೆ. ಜೀವನದಲ್ಲಿ ಕೇವಲ ಹಣ ಮುಖ್ಯವಲ್ಲ ಎಂಬುದನ್ನು ತಿಳಿದಿದ್ದೇನೆ' ಎಂದು ಅವರು ವಿವರಿಸಿದರು.

ಡಾ. ಅರವಿಂದ್ ಪಟೇಲ್, ಡಾ. ಜ್ಯೋತಿ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿದರು.  ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಎರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಜೆ.ಆರ್. ವಸ್ತ್ರದ್, ಉಪನ್ಯಾಸಕ ಡಾ.ಟಿ.ಎಂ. ಮೃತ್ಯುಂಜಯ ಸ್ವಾಮಿ, ಡಾ.ಸಂಪಿಗೆ ನಾಗರಾಜ್, ಬಾದಾಮಿ ಶಿವಲಿಂಗ ಉಪಸ್ಥಿತರಿದ್ದರು.

ಡಿ.ವೈ. ರೂಪಾ ಪ್ರಾರ್ಥಿಸಿದರು. ವೀರಪ್ಪ ಬಿರಾದಾರ್ ಸ್ವಾಗತಿಸಿದರು. ಅವಿನಾಶ್ ನಿರೂಪಿಸಿದರು. ಪರಿಷತ್‌ನ ಗ್ರಾಮೀಣ ಘಟಕದ ಅಧ್ಯಕ್ಷ ಗೋವರ್ಧನ ರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT