ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಭಿ ಥಿಪ್ರೆ ನೂತನ ರಾಷ್ಟ್ರೀಯ ದಾಖಲೆ

Last Updated 27 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಬಿಎಸಿ ತಂಡದ ಉದಯೋನ್ಮುಖ ಸ್ಪರ್ಧಿ ಸುರಭಿ ಥಿಪ್ರೆ ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಶ್ರಯದ ರಾಜ್ಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯರ 1500 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗೌರವಕ್ಕೆ ಪಾತ್ರರಾದರು.

ಬಸವನಗುಡಿ ಈಜು ಕೊಳದಲ್ಲಿ ನಡೆಯುತ್ತಿರುವ ಈಜು  ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಮಂಗಳವಾರ ಸುರಭಿ ಥಿಪ್ರೆ ಮಹಿಳೆಯರ 1500 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 17 ನಿಮಿಷ 50.95 ಸೆಕೆಂಡುಗಳಲ್ಲಿ ಗುರಿಮುಟ್ಟಿ 2007 ರಲ್ಲಿ ಪೊಲೀಸ್ ತಂಡದ ರಿಚಾ ಮಿಶ್ರಾ ಹೆಸರಿನಲ್ಲಿದ್ದ 18 ನಿಮಿಷ 00.64 ಸೆ. ಹಳೆ ದಾಖಲೆ ಕಾಲವನ್ನು ಅಳಿಸಿ ಹಾಕಿದರು. ಜೊತೆಗೆ ಶಿವರಂಜಿನಿ (2002) ಹೆಸರಿನಲ್ಲಿದ್ದ 18:36.11 ದಾಖಲೆ ಕಾಲವನ್ನು ಈ ಕೂಟದಲ್ಲಿ ಮರೆಗೊಳಿಸಿದರು.

ಕೂಟದ ಎರಡನೇ ದಿನ ಕೇವಲ ಎರಡು ದಾಖಲೆಗಳು ಬಂದುವು. ಪುರುಷರ 1500 ಮೀ ಫ್ರೀಸ್ಟೈಲ್‌ನಲ್ಲಿ ಬಿಎಸಿ ತಂಡದ ಎ.ಪಿ. ಗಗನ್ 16 ನಿಮಿಷ 19.23 ಸೆಕೆಂಡುಗಳಲ್ಲಿ ಮೊದಲಿಗರಾಗಿ ಕೂಟದ ದಾಖಲೆ ಸ್ಥಾಪಿಸಿದರು.

ಗಗನ್ ಅವರು 2006ರಲ್ಲಿ ರೋಹಿತ್ ಹವಾಲ್ದಾರ್ ಅವರು ಬರೆದಿದ್ದ ದಾಖಲೆಯನ್ನು (ಕಾಲ: 16:53.31 ಸೆ.) ಮುರಿಯುವಲ್ಲಿ ಯಶಸ್ವಿಯಾದರು.

ಎರಡನೇ ದಿನದ ಫಲಿತಾಂಶಗಳು ಇಂತಿವೆ:
ಪುರುಷರ ವಿಭಾಗ: 50 ಮೀ. ಫ್ರೀಸ್ಟೈಲ್: ಚೇತನ್ ಬಿ. ಆರಾಧ್ಯ (ಪಿಎಂಎಸ್‌ಸಿ)-1, ಮಿತೇಶ್ ಎಂ. ಕುಂಟೆ (ಬಿಎಸಿ)-2, ಕೆ.ಎಸ್. ಪ್ರಜ್ವಲ್ (ಬಿಎಸಿ)-3, ಕಾಲ: 0:26.39.; 1500 ಮೀ. ಫ್ರೀಸ್ಟೈಲ್: ಎ.ಪಿ. ಗಗನ್-1, ಸೌರಭ್ ಸಾಂಗ್ವೇಕರ್-2, ಎ. ಅಜಯ್-3 (ಮೂವರು ಬಿಎಸಿ), ಕಾಲ: 16:19.23 ನೂತನ ದಾಖಲೆ

ಹಳೆದು: 16:53.31.; 50 ಮೀ. ಬ್ರೆಸ್ಟ್‌ಸ್ಟ್ರೋಕ್: ಆದಿತ್ಯ ರೋಷನ್ (ಡಾಲ್ಫಿನ್)-1, ಎಸ್.ಪಿ. ಲಿಖಿತ್ (ಬಿಎಸಿ)-2, ಎಂ. ಅರವಿಂದ್ (ಬಿಎಸಿ)-3, ಕಾಲ: 0:32.00.; 200 ಮೀ. ಬ್ರೆಸ್ಟ್‌ಸ್ಟ್ರೋಕ್: ಎಸ್.ಪಿ. ಲಿಖಿತ್-1, ಆದಿತ್ಯ ರೋಷನ್-2, ಎಂ. ಅರವಿಂದ್-3, ಕಾಲ: 2:33.93.; 50 ಮೀ ಬಟರ್‌ಫ್ಲೈ: ಮಿತೇಶ್ ಎಂ. ಕುಂಟೆ-1, ಕೆ.ಎಸ್. ಪ್ರಜ್ವಲ್-2, ರಕ್ಷಿತ್ ಯು. ಶೆಟ್ಟಿ-3 (ಮೂವರು ಬಿಎಸಿ), ಕಾಲ: 0:27.63.;  100 ಮೀ. ಬಟರ್‌ಫ್ಲೈ: ಆ್ಯರನ್ ಡಿಸೋಜಾ ಏಂಜೆಲ್ (ಬಿಎಸಿ)-1, ಸೌರಭ್ ಸಾಂಗ್ವೇಕರ್-2, ರಕ್ಷಿತ್ ಯು. ಶೆಟ್ಟಿ-3, ಕಾಲ: 0:57.7.; 200 ಮೀ. ವೈಯಕ್ತಿಕ ಮೆಡ್ಲೆ: ರೆಹಾನ್ ಪೂಂಚ (ಬಿಎಸಿ)-1, ಎ.ಪಿ. ಗಗನ್-2, ಬಿ. ಪ್ರಣಾಮ್ (ಬಿಎಸಿ)-3, ಕಾಲ: 2:14.80.;

ಮಹಿಳಾ ವಿಭಾಗ: 50 ಮೀ. ಫ್ರೀಸ್ಟೈಲ್: ಟಿ. ಸ್ನೇಹಾ-1, ಕ್ಷಿಪ್ರಾ ಮಹಾಜನ್-2, ದಾಮಿನಿ ಕೆ. ಗೌಡ-3 (ಮೂವರು ಬಿಎಸಿ), ಕಾಲ: 0:27.34.; 1500 ಮೀ. ಫ್ರೀಸ್ಟೈಲ್: ಸುರಭಿ ಥಿಪ್ರೆ  (ಬಿಎಸಿ)-1, ಸುಶ್ಮಾ ಪ್ರತಾಪ್ (ಬಿಎಸಿ)-2, ಅರ್ಷಿತಾ ಎನ್. ಭಾರದ್ವಾಜ್ (ಪಿಎಂಎಸ್‌ಸಿ)-3, ಕಾಲ: 17:50.95 ನೂತನ ಕೂಟದ ದಾಖಲೆ ಹಾಗೂ ರಾಷ್ಟ್ರೀಯ ದಾಖಲೆ, ಹಳೆದು: 18:00.64.; 50 ಮೀ. ಬ್ರೆಸ್ಟ್‌ಸ್ಟ್ರೋಕ್: ಡಿ.ಎ. ಚಾರು ಹಂಶಿನಿ (ಬಿಎಸಿ)-1, ಭೂಮಿ ಆರ್. ಮೊಟ್ವಾನಿ (ಬಿಎಸಿ)-2, ಮಿನಾಲ್ ಬಿ. ಶಿವಪ್ರಕಾಶ್ (ಪಿಎಂಎಸ್‌ಸಿ)-3, ಕಾಲ: 0:38.15.; 200 ಮೀ. ಬ್ರೆಸ್ಟ್‌ಸ್ಟ್ರೋಕ್: ಭೂಮಿ ಆರ್. ಮೊಟ್ವಾನಿ -1, ಡಿ.ಎ.

ಚಾರು ಹಂಶಿನಿ-2, ಶ್ರೀಕಾ ಕೆ. ರಾಜು (ಬಿಎಸಿ)-3, ಕಾಲ: 2:53.71.; 50 ಮೀ. ಬಟರ್‌ಫ್ಲೈ:  ಪೂಜಾ ಆರ್. ಆಳ್ವ-1, ಫರಿಹಾ ಜಮಾನ್-2, ಟಿ. ಸ್ನೇಹಾ-3 (ಮೂವರು ಬಿಎಸಿ), ಕಾಲ: 0:30.95.; 100 ಮೀ. ಬಟರ್‌ಫ್ಲೈ: ಪೂಜಾ ಆರ್. ಆಳ್ವ-1, ಡಿ.ಎಂ. ಸಿಮ್ರಾನ್-2, ಶ್ರೀಕಾ ಕೆ. ರಾಜು-3 (ಮೂವರು ಬಿಎಸಿ), ಕಾಲ: 1:08.97.; 200 ಮೀ. ವೈಯಕ್ತಿಕ ಮೆಡ್ಲೆ: ಪೂಜಾ ಆರ್ ಆಳ್ವ-1, ಭೂಮಿ ಆರ್. ಮೊಟ್ವಾನಿ-2, ಮೇಘನಾ ಶ್ರೀವಾತ್ಸ (ಬಿಎಸಿ)-3, ಕಾಲ: 2:32.22.;
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT