ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆ ನಿಯಂತ್ರಣಕ್ಕೆ ಲಾರ್ವಾ ಮೀನು

Last Updated 23 ಆಗಸ್ಟ್ 2012, 5:25 IST
ಅಕ್ಷರ ಗಾತ್ರ

ಗಜೇಂದ್ರಗಡ: ನೀರಿನಲ್ಲಿ ಉತ್ಪತಿಯಾಗುವ ಸೊಳ್ಳೆಗಳ ಲಾರ್ವಾ ಮತ್ತು ಪ್ಯೂಪಾ ಹಂತಗಳನ್ನು ಸೊಳ್ಳೆಗಳಾಗಿ ಬೆಳೆಯುವ ಮುಂಚೆಯೇ ಆಹಾರವಾಗಿ ತಿನ್ನುವ ಲಾರ್ವಾ ಮೀನು ಸೊಳ್ಳೆಗಳ ನಿಯಂತ್ರಣಕ್ಕೆ ಅತ್ಯಗತ್ಯ ಎಂದು ಪುರಸಭೆ ಸ್ಥಾಯಿ ಸಮಿತಿ  ಅಧ್ಯಕ್ಷ ಚಂದ್ರಶೇಖರ್ ಚಳಗೇರಿ ಹೇಳಿದರು. 

ಇಲ್ಲಿನ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ~ಲಾರ್ವಾ ಜೈವಿಕ ನಿಯಂತ್ರಣ~  ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಾರ್ವಾ ಮೀನನ್ನು ಬಳಸಿಕೊಂಡು ಸೊಳ್ಳೆಗಳ ಉತ್ಪತಿ ಯಂತ್ರಿಸಿದರೆ, ಅವುಗಳಿಂದ ಹರಡುವ ರೋಗಗಳನ್ನು ಸಹ ನಿಯಂತ್ರಿಸಬಹುದು ಎಂದರು.

ಜೈವಿಕ ನಿಯಂತ್ರಣ ವಿಧಾನವು ಅತಿ ಸರಳವಾದ, ಅಗ್ಗವಾದ ಮತ್ತು ಶಾಶ್ವತವಾಗಿ ಬಳಸಬಹುದಾದ ಸುಲಭ ವಿಧಾನ. ಇದು ಪರಿಸರಕ್ಕೆ ಹೊಂದಿಕೊಳ್ಳುವ `ಹಾನಿ ರಹಿತ~ ವಿಧಾನವಾಗಿದೆ. ನಮ್ಮ ದೇಶದಲ್ಲಿ ಹಲವಾರು ಜಾತಿಯ ಲಾರ್ವಾಹಾರಿ ಮೀನುಗಳಿದ್ದು, ಅವುಗಳಲ್ಲಿ ಮುಖ್ಯವಾಗಿ ಕೆಲವು ಜಾತಿಯ ಮೀನುಗಳು ಹೆಚ್ಚಾಗಿ ಸೊಳ್ಳೆಮರಿಗಳನ್ನು ತಿನ್ನುವುದರಿಂದ ಮತ್ತು ಅವುಗಳ ವಿಶೇಷ ಗುಣಗಳಿಂದ ಸೊಳ್ಳೆ ನಿಯತ್ರಣಕ್ಕೆ ಬಳಸಲಾಗುತ್ತಿದೆ ಎಂದರು. ಲಾರ್ವಾ ಮೀನುಗಳಲ್ಲಿ ಎರಡು ಜಾತಿಯ ಮೀನುಗಳಿವೆ. ಇವೆರಡನ್ನು ಸೊಳ್ಳೆಗಳ ನಿಯಂತ್ರಣಕ್ಕೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಲೇರಿಯಾ, ಡೆಂಗೆ ಮತ್ತು ಚಿಕುನ್ ಗುನ್ಯಾ ಹಾಗೂ ಮೆದುಳು ಜ್ವರ ಸೊಳ್ಳೆಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಈ ಸೊಳ್ಳೆಗಳ ಉತ್ಪತಿಯನ್ನು ನಿಯಂತ್ರಿಸಲು ಹಲವು ವಿಧಾನಗಳಲ್ಲಿ ”ಜೈವಿಕ ನಿಯಂತ್ರಣ” ಒಂದು ಬಹು ಮುಖ್ಯ ವಿಧಾನ ಎಂದು ಪ್ರತಿಪಾದಿ ಸಿದರು.

ಲಾರ್ವ ಮೀನುಗಳನ್ನು ಕರೆ, ಕುಂಟೆಗಳಲ್ಲಿ ಬಿಡುವಾಗ ಬೆಳಕಿನ ಅಥವಾ ಸಂಜೆಯ ವೇಳೆಯಲ್ಲಿ ಮಾತ್ರ ಬಿಡಬೇಕು. ನೀರಿಗೆ ಮೀನುಗಳನ್ನು ಬಿಟ್ಟ ನಂತರ ಅವುಗಳ ಚಲನೆಯನ್ನು ಗುರುತಿಸಬೇಕು. ಸೊಳ್ಳೆಗಳ ಉತ್ಪತಿ ತಾಣಗಳನ್ನು ಗುರುತಿಸಿ, ಅವುಗಳಲ್ಲಿ ಮೀನುಗಳನ್ನು ಬಿಡಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ ಮಾತನಾಡಿ, ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏರ್ಪಡಿಸುವ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಜನತೆಯ ಪಾತ್ರ ಅತಿ ಮುಖ್ಯಎಂದರು. ಹಾಗೆಯೇ, ಸೊಳ್ಳೆಗಳಿಂದ ಹರ ಡುವ ಕಾಯಿಲೆಗಳಾದ ಮಲೇರಿಯಾ, ಮೆದುಳು ಜ್ವರ, ಡೆಂಗಡ ಮತ್ತು ಚಿಕುನ್ ಗುನ್ಯಾ ಹಾಗೂ ಆನೆ ಕಾಲು ರೋಗಗಳನ್ನು ತಡೆಗಟ್ಟಲು/ನಿಯಂತ್ರಿಸಲು ಜನತೆ ಉತ್ಸಕರಾಗಬೇಕು ಎಂದರು.

ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಪುರಸಭೆ ಸದಸ್ಯರಾದ ತಿಮ್ಮಣ್ಣ ವನ್ನಾಲ, ಪ್ರಭು ಚವಡಿ, ವೆಂಕಟೇಶ ಮುದಗಲ್, ಬಸವರಾಜ ಬಂಕದ, ಗಿರೀಶ ರಂಗ್ರೇಜಿ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT