ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದ ಸಮಸ್ಯೆ; ಸಂವಾದ

Last Updated 3 ಸೆಪ್ಟೆಂಬರ್ 2011, 10:20 IST
ಅಕ್ಷರ ಗಾತ್ರ

ಶಿರಾ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹದಿಹರೆಯದ ಸಮಸ್ಯೆಗಳು ಮತ್ತು ಆರೋಗ್ಯ ಸಂವಾದ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಅಶೋಕ್‌ಕುಮಾರ್, ವಿದ್ಯಾರ್ಥಿನಿ ಯರು ಆರೋಗ್ಯ ರಕ್ಷಣೆಯ ಜತೆಗೆ ಹದಿಹರೆಯದ ಸಮಸ್ಯೆಗಳನ್ನು ತಿಳಿದುಕೊಂಡು ಉತ್ತಮ ಆರೋಗ್ಯ ಗಳಿಸಬೇಕು ಎಂದು ಸಲಹೆ ಮಾಡಿದರು.

ಪ್ರಶ್ನೆ ಕೇಳುವುದನ್ನು ರೂಢಿಸಿ ಕೊಂಡಾಗ ಮಾತ್ರ ಜ್ಞಾನದ ಮಟ್ಟ ಹೆಚ್ಚಲು ಸಾಧ್ಯ. ಸಂವಾದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರಶ್ನೆ ಕೇಳಿದ 10 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಮಹಿಳೆಯರಲ್ಲಿ ಕಂಡು ಬರುವ ಗುಪ್ತ ರೋಗಗಳು, ತೊಂದರೆಗಳು, ಋತುಚಕ್ರ, ಗರ್ಭಧಾರಣೆ, ಸ್ತನ ಕ್ಯಾನ್ಸರ್, ಗರ್ಭಕೋಶ ಸಮಸ್ಯೆ, ಹೊಟ್ಟೆನೋವು ಇತ್ಯಾದಿಗಳ ಕುರಿತು ವೈದ್ಯೆ ಡಾ.ಶಿಲ್ಪ ವಿನಯ್, ಆಪ್ತ ಸಮಾಲೋಚಕಿ ಮಧು ಮಾಹಿತಿ ನೀಡಿದರು. ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿನಿಯರಿಂದ ಪ್ರಶ್ನೆಗಳ ಮಹಾಪೂರವೇ ಹರಿದು ಬಂತು.

ಪ್ರಾಚಾರ್ಯ ಪಿ.ಎಚ್.ಮಹೇಂದ್ರಪ್ಪ, ಉಪನ್ಯಾಸಕರಾದ ಆಂಜನೇಯಲು, ವಸಂತಕುಮಾರ್, ಮಹಂತೇಶ್ವರಯ್ಯ, ಎ.ನರಸಿಂಹರಾಜು, ಶ್ರೀಧರ ದತ್ತರಾಜು, ಬಿ.ಎನ್.ಶಿವಕುಮಾರ್, ಎಚ್.ಹೊನ್ನೇಶ್, ಸುಮಂಗಳ, ಬಿ.ಎಸ್.ದೇವರಾಜು, ಎನ್‌ಎಸ್‌ಎಸ್ ಅಧಿಕಾರಿ ಲಕ್ಷ್ಮಣಪ್ಪ, ಇಕೋ ಕ್ಲಬ್ ಸಂಚಾಲಕ ಎಚ್.ಗೋವಿಂದಯ್ಯ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT