ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಚಾಂಪಿಯನ್‌ಷಿಪ್; ಬಿಎಸ್‌ಎನ್‌ಎಲ್‌ಗೆ ಜಯ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟಿ.ಜೆ. ಬೋಪಣ್ಣ ತೋರಿದ ಚುರುಕಾದ ಪ್ರದರ್ಶನದ ನೆರವಿನಿಂದ ಬಿಎಸ್‌ಎನ್‌ಎಲ್ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ ತಂಡ 2-0ಗೋಲುಗಳಿಂದ ಕೂರ್ಗ್ ಬ್ಲೂಸ್ ಹಾಕಿ ಸಂಸ್ಥೆ ತಂಡವನ್ನು ಮಣಿಸಿತು.

ಬೋಪಣ್ಣ ಈ ಗೆಲುವಿನ ರೂವಾರಿ ಎನಿಸಿದರು. ಈ ಆಟಗಾರ 7 ಹಾಗೂ 59ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿದರು. ಎದುರಾಳಿ ತಂಡದ ಪರ ಯಾವುದೇ ಗೋಲು ಬರಲಿಲ್ಲ.

ದಿನದ ಇನ್ನೊಂದು ಪಂದ್ಯದಲ್ಲಿ ಬಿಇಎಂಎಲ್ ಬೆಂಗಳೂರು ತಂಡ 7-1ಗೋಲುಗಳಿಂದ ಫ್ಲೇಯಿಂಗ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು. ಬಿಇಎಂಎಲ್ ತಂಡದ ಕಿರಣ್ (8), ರಮೇಶ್ (9 ಹಾಗೂ 57), ಪ್ರದೀಪ್ ಮಾರಿಯಾ (11), ಅರವಿಂದ್ (21), ನಾಗಲಿಂಗಸ್ವಾಮಿ (54) ಹಾಗೂ ಸಚಿನ್ (59) ನಿಮಿಷಗಳಲ್ಲಿ ಗೋಲು ಕಲೆ ಹಾಕಿದರು.

ಮತ್ತೊಂದು ಪಂದ್ಯದಲ್ಲಿ ಡಿವೈಎಸ್‌ಎಸ್ `ಎ~ ತಂಡ 5-2ಗೋಲುಗಳಿಂದ ಬಿಇಎಲ್ ತಂಡವನ್ನು ಸೋಲಿಸಿತು. ವಿಜಯಿ ತಂಡದ ಸುಧಾಕರ್ 19 ಹಾಗೂ 53ನೇ ನಿಮಿಷದಲ್ಲಿ, ಸಚಿನ್ ಮಲ್ಲಾಡ್ 24 ಹಾಗೂ 33ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಇನ್ನೊಂದು ಗೋಲು ಶಶಿ ಗೌಡ ಅವರಿಂದ 49ನೇ ನಿಮಿಷದಲ್ಲಿ ಬಂತು.

ಸೋಮವಾರದ ಪಂದ್ಯಗಳು:
ಎಸ್‌ಡಬ್ಲ್ಯುಆರ್ ಹುಬ್ಬಳ್ಳಿ-ಸೀನರ್ಜಿ ಸ್ಪೋರ್ಟ್ಸ್ ಕ್ಲಬ್ (ಮಧ್ಯಾಹ್ನ 2.30) ಹಾಗೂ ಆರ್‌ಡಬ್ಲುಎಫ್-ಎಂಇಜಿ ಬಾಯ್ಸ ತಂಡ (ಸಂಜೆ 4ಗಂಟೆಗೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT