ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲ್ ಆಫ್ ಫೇಮ್: ಅಂಬ್ರೋಸ್‌ಗೆ ಸ್ಥಾನ

Last Updated 12 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ದುಬೈ (ಐಎಎನ್‌ಎಸ್): ಮಾಜಿ ವೇಗದ ಬೌಲರ್‌ಗಳಾದ ಕರ್ಟ್ಲಿ ಅಂಬ್ರೋಸ್ ಮತ್ತು ಅಲನ್ ಡೇವಿಡ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) `ಹಾಲ್ ಆಫ್ ಫೇಮ್~ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾ ಮಹಿಳಾ ತಂಡದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ಕೂಡಾ ಪ್ರತಿಷ್ಠಿತರ ಪಟ್ಟಿಯನ್ನು ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗಿ ದಿವಂಗತ ಫ್ರೆಡ್ರಿಕ್ ಸ್ಪಫೋರ್ಥ್ ಅವರ ಹೆಸರನ್ನೂ `ಹಾಲ್ ಆಫ್ ಫೇಮ್~ ಪಟ್ಟಿಗೆ ಸೇರಿಸಲಾಗಿದೆ.

ಐಸಿಸಿ `ಹಾಲ್ ಆಫ್ ಫೇಮ್~ ಪಟ್ಟಿಯಲ್ಲಿ ಈಗಾಗಲೇ 64 ಹೆಸರುಗಳು ಇವೆ. ಇದರಲ್ಲಿರುವ ಮಹಿಳಾ ಆಟಗಾರ್ತಿ ಒಬ್ಬರು ಮಾತ್ರ. ಇದೀಗ ಈ ಪಟ್ಟಿಯನ್ನು ಸೇರಿದ ಎರಡನೇ ಮಹಿಳಾ ಆಟಗಾರ್ತಿ ಎಂಬ ಗೌರವ ಬೆಲಿಂಡಾ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT