ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆ’

Last Updated 19 ಸೆಪ್ಟೆಂಬರ್ 2013, 6:53 IST
ಅಕ್ಷರ ಗಾತ್ರ

ಹೊಳಲ್ಕೆರೆ: ಹೈನುಗಾರಿಕೆ ನಡೆಸುವುದರಿಂದ ಆರ್ಥಿಕವಾಗಿ ಸಬಲರಾಗಬಹುದು  ಎಂದು ಚಿತ್ರದುರ್ಗದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನಕುಮಾರ್‌ ಹೇಳಿದರು.

ತಾಲ್ಲೂಕಿನ ಈಚಘಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬುಧವಾರ ನಡೆದ ಹೈನುಗಾರಿಕೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಾವಯವ ಗೊಬ್ಬರ ಬಳಕೆ, ತಳಿಸಂವರ್ಧನೆ, ಉತ್ತಮ ಮೇವು, ಕಾಯಿಲೆಗಳು ಮತ್ತು ಪರಿಹಾರ, ಕರುಗಳ ಪಾಲನೆ, ಕೃತಕ ಗರ್ಭಧಾರಣೆ ಕುರಿತು ಮಾಹಿತಿ ನೀಡಿದರು.

ತಾಲ್ಲೂಕು ಪಶು ಇಲಾಖೆ ಸಹಾಯಕ ನಿರ್ದೇಶಕ ರೆಹಮತ್ ಉಲ್ಲಾ ಮಾತನಾಡಿ, ಅಜೋಲ ಬೆಳೆಯುವುದು, ಮೇವು ಕಟಾವು, ಕೊಟ್ಟಿಗೆ ನಿರ್ಮಾಣ, ಸರ್ಕಾರದ ಸಹಾಯಧನಗಳ ಕುರಿತು ಮಾಹಿತಿ ನೀಡಿದರು. ಹೈನುಗಾರಿಕೆ ಮೇಲ್ವಿಚಾರಕ ಮಂಜುನಾಥ, ಉಮೇಶ್‌, ವರುಣ ಕುಮಾರ್‌, ಗ್ರಾ.ಪಂ. ಸದಸ್ಯೆ ರಂಗಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT