ಟಿ.ಜಿ.ಟಿ. ಎಂಬ ಬಲವಂತದ ಹಣೆಪಟ್ಟಿ
ಒಂದರಿಂದ ಏಳನೇ ತರಗತಿವರೆಗಿದ್ದ ಪ್ರಾಥಮಿಕ ಶಾಲೆಗಳಲ್ಲಿ ಹಲವನ್ನು ಸರ್ಕಾರ, ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಉನ್ನತೀಕರಿಸಿ ಎಂಟನೇ ತರಗತಿಯನ್ನು ಪ್ರಾರಂಭಿಸಿದೆ. ಪ್ರೌಢಶಾಲೆಯೊಂದಿಗಿದ್ದ ಎಂಟನೇ ತರಗತಿಗೆ ಬೋಧಿಸಲು ಬಿ.ಎಸ್ಸಿ., ಬಿ.ಎಡ್ ಆದ ಶಿಕ್ಷಕರನ್ನು ನೇಮಿಸಿದೆ. ಅವರು ಗಣಿತ, ವಿಜ್ಞಾನ ಬೋಧಿಸುತ್ತಾರೆ. ಉಳಿದ ವಿಷಯಗಳನ್ನು ಪ್ರಾಥಮಿಕ ಶಾಲಾ ಶಿಕ್ಷಕರೇ ಬೋಧಿಸುತ್ತಿದ್ದಾರೆ. ಈಚೆಗೆ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಗಣಿತ, ವಿಜ್ಞಾನ ಬೋಧಿಸುವ ಶಿಕ್ಷಕರನ್ನೂ ನೇಮಿಸಲಾಗಿಲ್ಲ.Last Updated 8 ಜುಲೈ 2014, 19:30 IST