ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿವರ್ಸ್‌ ಟ್ರೈಕ್‌: ಸ್ಪಾಟರ್‌ ಮೊಬಿಲಿಟಿಯಿಂದ ಕಾರು–ಬೈಕ್‌ ನಡುವಿನ ವಾಹನ

Last Updated 3 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್‌ನಂತೆ ಸವಾರಿ ಮಾಡಬಹುದಾದ, ಕಾರಿನ ಸೌಲಭ್ಯವುಳ್ಳ ದೇಶೀಯ ಆವಿಷ್ಕಾರದ ‘ಸ್ಪಾಟರ್‌’ ರಿವರ್ಸ್‌ ಟ್ರೈಕ್‌ ವಾಹನವನ್ನು ಹುಬ್ಬಳ್ಳಿಯ ಸ್ಪಾಟರ್‌ ಮೊಬಿಲಿಟಿ ಸಲ್ಯೂಷನ್‌ ಸಂಸ್ಥೆ ಹೊರತಂದಿದೆ.

ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಈ ವಾಹನವನ್ನು ಸಂಸ್ಥೆ ಪ್ರದರ್ಶಿಸಿದೆ. ಮೂರು ಚಕ್ರ ಈ ವಾಹನ, ಮುಂಭಾಗದಲ್ಲಿ ಎರಡು ಚಕ್ರ, ಹಿಂಭಾಗದಲ್ಲಿ ಒಂದು ಚಕ್ರ ಹೊಂದಿದೆ. ಬೈಕ್‌ನಂತೆ ಎರಡು ಆಸನದ ಸೌಲಭ್ಯವಿದ್ದು, ಹವಾನಿಯಂತ್ರಿತ ವ್ಯವಸ್ಥೆ ಇದೆ. ಇದು ಎಲೆಕ್ಟ್ರಿಕ್‌ ವಾಹನವಾಗಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 120ರಿಂದ 150 ಕಿ.ಮೀ ಸಂಚರಿಸಬಹುದು ಎಂದು ಸಂಸ್ಥೆಯ ಕಿರಣ್ ಅಗಡಿ ತಿಳಿಸಿದರು.

‘ಪ್ರಥಮ ಬಾರಿಗೆ ಈ ವಾಹನವನ್ನು ಪ್ರದರ್ಶಿಸಿದ್ದೇವೆ. ಮಾರ್ಚ್‌ನಲ್ಲಿ ಬುಕಿಂಗ್‌ ಆರಂಭಿಸಲಾಗುತ್ತದೆ. ಜೂನ್‌ ವೇಳೆಗೆ ಪೂರೈಕೆಯಾಗುತ್ತದೆ. ಈ ವಾಹನದ ಬೆಲೆ ಸುಮಾರು ₹2.5 ಲಕ್ಷ’ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT