ನವದೆಹಲಿ: ಅಮೆರಿಕದ ವಿಲಾಸಿ ಮೋಟಾರ್ ಸೈಕಲ್ ಬ್ರಾಂಡ್ ಹಾರ್ಲೆ ಡೇವಿಡ್ಸನ್ ಜತೆಗಿನ ಪಾಲುದಾರಿಕೆಯನ್ನು ಮುಂದುವರಿಸಿರುವ ಭಾರತದ ಹೀರೊ ಮೋಟೊಕಾರ್ಪ್, ಆ ಮೂಲಕ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆ ಘೋಷಿಸಿದೆ.

ಉಭಯ ಕಂಪನಿಗಳ ಒಪ್ಪಂದದ ಮೂಲಕ ಹಾರ್ಲೆ ಡೇವಿಡ್ಸನ್ ಎಕ್ಸ್440ಯ ಹೊಸ ಅವತರಣಿಕೆ ಹಾಗೂ ಇತರ ಹೊಸ ಮಾದರಿಯ ಬೈಕ್ಗಳನ್ನು ಅಭಿವೃದ್ಧಿಪಡಿಸುವತ್ತ ಯೋಜನೆ ಹೊಂದಲಾಗಿದೆ. ಈ ಕುರಿತು ಹೀರೊ ಮೋಟೊಕಾರ್ಪ್ ಷೇರುಪೇಟೆಗೆ ಮಾಹಿತಿ ನೀಡಿದೆ.

ಈ ಎರಡೂ ಕಂಪನಿಗಳು 2020ರಲ್ಲಿ ಜತೆಗೂಡಿದ್ದು, ಕಳೆದ ವರ್ಷ ಎಕ್ಸ್440 ಬೈಕ್ ಅನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದವು. ಈ ಒಪ್ಪಂದದ ಅಡಿಯಲ್ಲಿ ಹಾರ್ಲೆ ಡೇವಿಡ್ಸನ್ ಹೆಸರಿನಲ್ಲಿ ಹೀರೊ ಮೋಟೊಕಾರ್ಪ್ ಅಭಿವೃದ್ಧಿಪಡಿಸುವ ಉನ್ನತ ಶ್ರೇಣಿಯ ಮೋಟಾರ್ ಸೈಕಲ್ಗಳನ್ನು ಮಾರಾಟ ಮಾಡಲು ಅನುಮತಿಸಲಾಗಿತ್ತು. ಜತೆಗೆ ಹಾರ್ಲೆ ಬೈಕ್ಗಳ ಸರ್ವೀಸ್ ಮತ್ತು ಬಿಡಿ ಭಾಗಗಳ ಪೂರೈಕೆಗೂ ಅವಕಾಶ ನೀಡಲಾಗಿತ್ತು.

ಹಾರ್ಲೆ ಆ್ಯಕ್ಸಸರೀಸ್, ಉಡುಪುಗಳು, ರೈಡಿಂಗ್ ಗೇರ್ಗಳನ್ನು ಭಾರತದಲ್ಲಿ ಮಾರಾಟ ಮಾಡುವ ಹಕ್ಕನ್ನು ಹೀರೊ ಮೋಟೊಕಾರ್ಪ್ ಕೂಡಾ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.