ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಿಂದ ಹೋಂಡಾ ಕಾರುಗಳ ಬೆಲೆ ಹೆಚ್ಚಳ

Published 3 ಡಿಸೆಂಬರ್ 2023, 14:43 IST
Last Updated 3 ಡಿಸೆಂಬರ್ 2023, 14:43 IST
ಅಕ್ಷರ ಗಾತ್ರ

ನವದೆಹಲಿ: ’ಹೋಂಡಾ ಕಾರ್‍ಸ ಇಂಡಿಯಾ ಕಂಪನಿ‘ಯು 2024ರ ಜನವರಿಯಿಂದ ತನ್ನ ಎಲ್ಲ ಮಾದರಿ ವಾಹನಗಳ ಬೆಲೆಯನ್ನು ಹೆಚ್ಚಿಸಲು ಉದ್ದೇಶಿಸಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಯಾರಿಕಾ ವೆಚ್ಚದ ಪರಿಣಾಮವನ್ನು ಭಾಗಶಃ ಸರಿದೂಗಿಸಲು ಕಂಪನಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.

ತಯಾರಿಕಾ ವೆಚ್ಚ ಹೆಚ್ಚಳದಿಂದ ಎಲ್ಲ ಮಾದರಿಯ ಕಾರುಗಳ ಬೆಲೆಯನ್ನು ಮುಂದಿನ ತಿಂಗಳಿಂದ ಹೆಚ್ಚಿಸಲಾಗುವುದು ಎಂದು ಹೋಂಡಾ ಕಾರ‍್ಸ‌ನ ಭಾರತೀಯ ಉಪಾಧ್ಯಕ್ಷ (ಮಾರ್ಕೆಟಿಂಗ್‌ ಮತ್ತು ಸೇಲ್ಸ್‌) ಕುನಾಲ್ ಬೆಲ್ಹಾ ತಿಳಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಮಾದರಿವಾರು ಕಾರುಗಳ ಬೆಲೆ ಹೆಚ್ಚಳದ ಮೊತ್ತವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ. ಎಲಿವೇಟ್‌, ಸಿಟಿ ಮತ್ತು ಅಮೇಜ್‌ ಮಾದರಿಯ ಕಾರುಗಳನ್ನು ಈ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ಮಾರುತಿ ಸುಜುಕಿ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಔಡಿ ಇಂಡಿಯಾ, ಟಾಟಾ ಮೋಟರ್ಸ್‌ ಮತ್ತು ಮರ್ಸಿಡಿಸ್‌ ಬೆಂಜ್‌ ಕಂಪನಿಗಳು ಸರಕುಗಳ ಬೆಲೆ ಹೆಚ್ಚಳದ ಕಾರಣದಿಂದ 2024ರ ಜನವರಿಯಿಂದ ತಮ್ಮ ಪ್ರಯಾಣಿಕರ ವಾಹನದ ಬೆಲೆಯನ್ನು ಹೆಚ್ಚಳ ಮಾಡಲಾಗುವುದು ಎಂದು ಈಗಾಗಲೇ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT