ಭಾನುವಾರ, ಅಕ್ಟೋಬರ್ 25, 2020
23 °C

ಕ್ಯೂ8 ಸೆಲೆಬ್ರೇಷನ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ, ‘ಕ್ಯೂ8 ಸೆಲೆಬ್ರೇಷನ್’ ಹೆಸರಿನ ಹೊಸ ಮಾದರಿಯ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಎಕ್ಸ್–ಷೋರೂಂ ಬೆಲೆ
₹ 98.98 ಲಕ್ಷ. ದಸರಾ ಮತ್ತು ದೀಪಾವಳಿ ಹಬ್ಬಗಳ ಹೊತ್ತಿನಲ್ಲಿ ಕಂಪನಿಯು ಈ ಕಾರನ್ನು ಮಾರುಕಟ್ಟೆಗೆ ತಂದಿದೆ.

ಈ ಕಾರು 3 ಲೀಟರ್ ಸಾಮರ್ಥ್ಯದ ಎಂಜಿನ್ ಹೊಂದಿದೆ. ಕೇವಲ 5.9 ಸೆಕೆಂಡುಗಳ ಅವಧಿಯಲ್ಲಿ ಪ್ರತಿ ಗಂಟೆಗೆ 100 ಕಿ.ಮೀ. ವೇಗ ತಲುಪುತ್ತದೆ ಎಂದು ಕಂಪನಿ ಹೇಳಿದೆ. ಕಚ್ಚಾ ರಸ್ತೆಗಳಿಗೂ ಸರಿಹೊಂದುವ ರೀತಿಯಲ್ಲಿ ಕಾರಿನ ವಿನ್ಯಾಸ ಇದೆ.

‘ದೇಶದ ಆಟೊಮೊಬೈಲ್‌ ಉದ್ಯಮವು ಈ ಹಬ್ಬಗಳ ಅವಧಿಯಲ್ಲಿ ಹೆಚ್ಚಿನ ಮಾರಾಟವನ್ನು ಕಾಣುತ್ತಿದೆ. ಈಗ ನಾವು ನಮ್ಮ ಕ್ಯೂ ಸರಣಿಯಲ್ಲಿ ಹೊಸದಾದ ಒಂದು ಕಾರನ್ನು ಪರಿಚಯಿಸುತ್ತಿದ್ದೇವೆ. ಈ ವರ್ಷದ ಜನವರಿಯಲ್ಲಿ ಕ್ಯೂ8 ಕಾರನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದಲೂ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ಕ್ಯೂ8 ಸೆಲೆಬ್ರೇಷನ್ ಕಾರಿನ ಬಿಡುಗಡೆಯ ಕಾರಣದಿಂದಾಗಿ, ಕ್ಯೂ ಸರಣಿ ಕುರಿತು ಜನರಿಗೆ ಇರುವ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ ಎಂಬ ನಂಬಿಕೆ ನಮಗಿದೆ’ ಎಂದು ಔಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಸನ್‌ರೂಫ್‌, ಎಂಟು ಏರ್‌ಬ್ಯಾಗ್‌ಗಳು, ಪಾರ್ಕಿಂಗ್ ಅಸಿಸ್ಟ್ ವ್ಯವಸ್ಥೆ, ಎಲ್‌ಇಡಿ ಹೆಡ್‌ಲ್ಯಾಂಪ್‌ ಸೇರಿದಂತೆ ಹಲವು ವೈಶಿಷ್ಟ್ಯಗಳು ಈ ಕಾರಿನಲ್ಲಿ ಇವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು