ಸೋಮವಾರ, ನವೆಂಬರ್ 18, 2019
25 °C
ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್ ಬೈಕ್‌ಗಳಿಗೆ ಪ್ರತಿಸ್ಪರ್ಧಿ?

ಬೆನೆಲ್ಲಿ ಹೊಸ ಬೈಕ್‌ 'ಇಂಪೀರಿಯಲ್‌ 400'; ಬೆಲೆ ₹1.69 ಲಕ್ಷ

Published:
Updated:

ನವದೆಹಲಿ: ಇಟಲಿಯ ಸೂಪರ್‌ಬೈಕ್‌ ಉತ್ಪಾದನಾ ಸಂಸ್ಥೆ ಬೆನೆಲ್ಲಿ ಮಂಗಳವಾರ ಭಾರತದಲ್ಲಿ ಕ್ಲಾಸಿಕ್‌ ಮಾದರಿಯ 'ಇಂಪೀರಿಯಲ್‌ 400' ಬೈಕ್‌ ಬಿಡುಗಡೆ ಮಾಡಿದೆ. ಇದು ಭಾರತದ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್ ಬೈಕ್‌ಗಳಿಗೆ ಪ್ರತಿಸ್ಪರ್ಧಿ ಎಂದೇ ಬಿಂಬಿತವಾಗಿದೆ. 

ಪ್ರಸ್ತುತ ನವದೆಹಲಿಯ ಶೋರೂಂನಲ್ಲಿ 'ಇಂಪೀರಿಯಲ್‌ 400' ಬೈಕ್‌ ಬೆಲೆ ₹1.69 ಲಕ್ಷ ನಿಗದಿಯಾಗಿದೆ.  

374 ಸಿಸಿ ಏರ್‌–ಕೂಲ್ಡ್‌ ಬಿಎಸ್‌ 6 ಎಂಜಿನ್‌ ಹೊಂದಿರುವ ಈ ಬೈಕ್‌ ಗರಿಷ್ಠ 21ಪಿಎಸ್‌(5500ಆರ್‌ಪಿಎಂ) ಸಾಮರ್ಥ್ಯದೊಂದಿಗೆ ಶಕ್ತಿಯುತ ಬೈಕ್‌ ಎನಿಸಿದೆ.  

ಇಂಪೀರಿಯಲ್‌ 400 ಮೂಲಕ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಆವರಿಸಿಕೊಳ್ಳಲಿದ್ದೇವೆ ಎಂದು ಬೆನೆಲ್ಲಿ ಇಂಡಿಯಾದ ಎಂ.ಡಿ. ವಿಕಾಸ್‌ ಝಬಖ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಭಾರತದಲ್ಲಿ ಬೆನೆಲ್ಲಿ ಕಳೆದ ಎರಡು ತಿಂಗಳಿಂದ ಹೊಸ ಮಾದರಿಯ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಬೈಕ್‌ ಪ್ರಿಯರು ಬೆನೆಲ್ಲಿ ಇಂಡಿಯಾ(https://india.benelli.com/) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಸಮೀಪದ ಬೆನೆಲ್ಲಿ ಇಂಡಿಯಾ ಡೀಲರ್‌ಶಿಪ್‌ ಹೊಂದಿರುವವರ ಬಳಿ ₹4,000 ಆರಂಭಿಕ ಪಾವತಿಯೊಂದಿಗೆ ಬೈಕ್‌ ಬುಕ್‌ ಮಾಡಬಹುದು. 

ಇಂಪೀರಿಯಲ್‌ 400 ಖರೀದಿಸಿದ ಗ್ರಾಹಕರಿಗೆ ಕಂಪನಿ ಮೊದಲ ಮೂರು ವರ್ಷಗಳ ವರೆಗೂ(ಕ್ರಮಿಸುವ ಕಿ.ಮೀ. ಮಿತಿ ಇಲ್ಲ) ಕಂಪನಿ ವಾರಂಟಿ ನೀಡುತ್ತಿದೆ. ಮೊದಲ 2 ವರ್ಷಗಳ ವರೆಗೂ ಉಚಿತವಾಗಿ ಸರ್ವೀಸ್‌ ಒದಗಿಸಲಿದೆ. 2 ವರ್ಷಗಳ ಸೇವೆಯ ಬಳಿಕ ವಾರ್ಷಿಕ ನಿರ್ವಹಣೆ ಒಪ್ಪಂದವನ್ನು ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶ ನೀಡಿದೆ. 

ಪ್ರತಿಕ್ರಿಯಿಸಿ (+)