ಭಾನುವಾರ, ಆಗಸ್ಟ್ 1, 2021
25 °C

‘ಬಿಎಂಡಬ್ಲ್ಯು 220ಐ ಸ್ಪೋರ್ಟ್‌’ನ ಪೆಟ್ರೋಲ್‌ ಅವತರಣಿಕೆ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು ಕಂಪನಿಯು ತನ್ನ ‘2 ಸೀರೀಸ್‌ ಗ್ರ್ಯಾನ್ ಕೂಪೆ’ಯ ಹೊಸ ‘220ಐ ಸ್ಪೋರ್ಟ್‌’ ಪೆಟ್ರೋಲ್‌ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 37.9 ಲಕ್ಷ.

ಚೆನ್ನೈನ ಘಟಕದಲ್ಲಿ ತಯಾರಾಗಿರುವ ಇದು ಬುಧವಾರದಿಂದಲೇ ವಿತರಣಾ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಪೆಟ್ರೋಲ್‌ ಮಾದರಿಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಸ್ಟೈಲ್‌ ಮತ್ತು ಕಾರ್ಯಕ್ಷಮತೆ ಒಳಗೊಂಡಿರುವ ಬಿಎಂಡಬ್ಲ್ಯು ಜಗತ್ತನ್ನು ಪ್ರವೇಶಿಸಲು ಬಯಸುವವರಿಗೆ ಹೊಸ 220ಐ ಸ್ಪೋರ್ಟ್ ಪ್ರಮುಖ ಆಯ್ಕೆ’ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವ್ಹಾ ಹೇಳಿದ್ದಾರೆ.

ಈ ಕಾರು ಎರಡು ಲೀಟರ್ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು, 190 ಎಚ್‌ಪಿ ಶಕ್ತಿ ಉತ್ಪಾದಿಸಬಲ್ಲದು. ಡ್ರೈವರ್‌ ಮತ್ತು ಮುಂಬದಿ ಪ್ರಯಾಣಿಕರಿಗೆ ಸ್ಪೋರ್ಟ್ ಸೀಟ್‌, ಆಂಬಿಯಂಟ್‌ ಲೈಟ್‌ ಪ್ಯಾಕೇಜ್, ಪನೊರಮಾ ಸನ್‌ರೂಫ್‌, ಪಾರ್ಕಿಂಗ್‌ ಅಸಿಸ್ಟೆಂಟ್ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳು ಇದರಲ್ಲಿವೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು