ಬಿಎಂಡಬ್ಲ್ಯು ಮೋಟಾರ್ ಕಂಪನಿಯು ಹೊಸ ಆರ್18 ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಕ್ರ್ಯೂಸರ್ ಬೈಕ್ ವಿಭಾಗಕ್ಕೆ ಕಾಲಿಟ್ಟಿದೆ.

ಹೊಸ ಬೈಕ್ 1,802 ಸಿಸಿ ಎಂಜಿನ್ ಹೊಂದಿದ್ದು, 6 ಸ್ಪೀಡ್ ಟ್ರಾನ್ಸ್ಮಿಷನ್ ಒಳಗೊಂಡಿದೆ. 1802 ಸಿಸಿ ಎಂಜಿನ್ 4,750 ಆರ್ಪಿಎಂ ನಲ್ಲಿ 91 ಎಚ್ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ರೈನ್, ರೋಲ್ ಮತ್ತು ರಾಕ್ ರೈಡಿಂಗ್ ಆಯ್ಕೆಗಳಿವೆ. ಹೊಸ ಬಿಎಂಡಬ್ಲ್ಯು ಆರ್ 18 ಬೆಲೆ ₹ 18,90,000 ಹಾಗೂ ಬಿಎಂಡಬ್ಲ್ಯು ಆರ್ 18 ಫರ್ಸ್ಟ್ ಎಡಿಷನ್ ಬೆಲೆ ₹ 21,90,000 ಇದೆ (ಎಕ್ಸ್ ಷೋರೂಂ)

‘ಕ್ರ್ಯೂಸರ್ ವಿಭಾಗದಲ್ಲಿ ಬಹುನಿರೀಕ್ಷಿತ ಬೈಕ್ ಇದಾಗಿದೆ. ಮೋಟರ್ಸೈಕಲಿಂಗ್ ಮಾಡುವ ಉತ್ಸಾಹಿಗಳು ಮತ್ತು ಬಿಎಂಡಬ್ಲ್ಯು ಫ್ಯಾನ್ಸ್ ಈ ಬೈಕ್ಗಾಗಿ ಕಾತರದಿಂದ ಎದುರು ನೋಡುತ್ತಿದ್ದರು’ ಎಂದು ಬಿಎಂಡಬ್ಲ್ಯು ಸಮೂಹದ ಅಧ್ಯಕ್ಷ ವಿಕ್ರಂ ಪವಾಹ್ ತಿಳಿಸಿದ್ದಾರೆ.

ಆಧುನಿಕ ತಂತ್ರಜ್ಞಾನದೊಂದಿಗೆ ಕ್ಲಾಸಿಕ್ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದ್ದು, ಬೈಕ್ ಆಕರ್ಷಕವಾಗಿದೆ. ಆರಾಮದಾಯಕ ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ್ದಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.