ಶುಕ್ರವಾರ, ಜೂನ್ 25, 2021
22 °C

ಆಗಸ್ಟ್‌ 15ಕ್ಕೆ ಸಿಂಪಲ್‌ ಎನರ್ಜಿ ಕಂಪನಿಯ ಮೊದಲ ಇ–ಸ್ಕೂಟರ್‌ ಮಾರುಕಟ್ಟೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ವಿದ್ಯುತ್‌ ಚಾಲಿತ ವಾಹನಗಳನ್ನು (ಇವಿ) ತಯಾರಿಸುವ ನವೋದ್ಯಮ ಸಿಂಪಲ್‌ ಎನರ್ಜಿ, ಆಗಸ್ಟ್‌ 15ರಂದು ತನ್ನ ಮೊದಲ ಇ–ಸ್ಕೂಟರ್ ಬಿಡುಗಡೆ ಮಾಡುವುದಾಗಿ ಶನಿವಾರ ಹೇಳಿದೆ.

ಇ–ಸ್ಕೂಟರ್‌ ಬೆಲೆಯು ₹ 1.10 ಲಕ್ಷದಿಂದ ₹ 1.20 ಲಕ್ಷದವರೆಗೆ ಇರಲಿದೆ ಎಂದು ಕಂಪನಿ ತಿಳಿಸಿದೆ. ಹೊಸ ಇ–ಸ್ಕೂಟರ್‌ 4.8 ಕಿಲೋ ವಾಟ್‌ ಲೀಥಿಯಂ ಅಯಾನ್‌ ಬ್ಯಾಟರಿ ಹೊಂದಿರಲಿದ್ದು, ಇಕೊ ಮೋಡ್‌ನಲ್ಲಿ 240 ಕಿ.ಮೀ ಮತ್ತು ಗರಿಷ್ಠ ವೇಗ ಗಂಟೆಗೆ 100 ಕಿ.ಮೀ ಇರಲಿದೆ ಎಂದು ಹೇಳಿದೆ.

ಮೊದಲ ಹಂತದಲ್ಲಿ ಬೆಂಗಳೂರು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಬಳಿಕ ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಬಿಡುಗಡೆ ಆಗಲಿದೆ. ನಂತರ ಬೇರೆ ನಗರಗಳನ್ನೂ ಪ್ರವೇಶಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಯಾರಿಕಾ ಘಟಕವನ್ನಷ್ಟೇ ಅಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಕೆಂದ್ರವನ್ನೂ ಬೆಂಗಳೂರಿನಲ್ಲಿ ಹೊಂದಿದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 112 ಕೋಟಿ ಬಂಡವಾಳ ಸಂಗ್ರಹಿಸಲು ಕಂಪನಿ ಉದ್ದೇಶಿಸಿದೆ. ಸ್ಕೂಟರ್‌ ಬಿಡುಗಡೆಗೂ ಮುನ್ನವೇ ಬೆಂಗಳೂರಿನಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನೂ ಸ್ಥಾಪಿಸುವ ಆಲೋಚನೆ ಇದೆ ಎಂದೂ ಕಂಪನಿ ತಿಳಿಸಿದೆ.

ಭಾರತದ ಕಂಪನಿ ತಯಾರಿಸಿರುವ ವಿಶ್ವದರ್ಜೆಯ ಉತ್ಪನ್ನದ ಮೂಲಕ ಇತಿಹಾಸ ಸೃಷ್ಟಿಸುವ ಗುರಿಯನ್ನು ಸಿಂಪಲ್ ಎನರ್ಜಿ ಹೊಂದಿದೆ ಎಂದು ಕಂಪನಿಯ ಸ್ಥಾಪಕ ಸುಹಾಸ್‌ ರಾಜ್‌ಕುಮಾರ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು