ಶನಿವಾರ, ಜೂನ್ 25, 2022
25 °C

ಹೊಸ ಸ್ಪ್ಲೆಂಡರ್‌ ಬೆಲೆ ₹ 72,900

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೀರೊ ಮೊಟೊಕಾರ್ಪ್‌ ಕಂಪನಿಯು ತನ್ನ ಜನಪ್ರಿಯ ಮೋಟರ್‌ಸೈಕಲ್‌ ಸ್ಪ್ಲೆಂಡರ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದರ ಎಕ್ಸ್‌ ಷೋರೂಂ ಬೆಲೆ ₹ 72,900 ಇದೆ.

ಹೊಸ ಸ್ಪ್ಲೆಂಡರ್‌+ ಎಕ್ಸ್‌ಟೆಕ್‌, ಬ್ಲುಟೂತ್‌ ಸಂಪರ್ಕದೊಂದಿಗೆ ಡಿಜಿಟಲ್‌ ಮೀಟರ್‌, ಕಾಲ್‌ ಮತ್ತು ಎಸ್‌ಎಂಎಸ್‌ ಅಲರ್ಟ್‌, ರಿಯಲ್‌ ಟೈಮ್‌ ಮೈಲೇಜ್‌ ಇಂಡಿಕೇಟರ್‌, ಲೋ ಫ್ಯೂಯೆಲ್‌ ಇಂಡಿಕೇಟರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೀರೊ ಸ್ಪ್ಲೆಂಡರ್‌, ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಮಾರಾಟ ಕಂಡಿರುವ ಮೋಟರ್‌ಸೈಕಲ್‌ ಆಗಿದೆ. ಹೊಸ ಆವೃತ್ತಿಯು ಇನ್ನಷ್ಟು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಇದೆ ಎಂದು ಕಂಪನಿಯ ಜಾಗತಿಕ ಉತ್ಪನ್ನ ಯೋಜನೆ ವಿಭಾಗದ ಮುಖ್ಯಸ್ಥ ಮಾಲೋ ಲೆ ಮಾಸ್ಸನ್‌ ಹೇಳಿದ್ದಾರೆ. ಐದು ವರ್ಷಗಳ ವಾರಂಟಿ ಇದೆ ಎಂದು ಕಂಪನಿಯು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು