ಶುಕ್ರವಾರ, ಜನವರಿ 27, 2023
21 °C

ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಆವೃತ್ತಿ ದೇಶದಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ದೇಶದ ಕಾರು ಮಾರುಕಟ್ಟೆಗೆ ನೂತನ ಅಮೇಜ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸಿದೆ.

ಹೋಂಡಾ ಸೆಡಾನ್ ಕಾರು ಅಮೇಜ್ ಫೇಸ್‌ಲಿಫ್ಟ್ ಮ್ಯಾನ್ಯುವಲ್ ಮತ್ತು ಸಿವಿಟಿ ಟ್ರಾನ್ಸ್‌ಮಿಷನ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದೆ.

ಜತೆಗೆ ಹೋಂಡಾ ಈ ಬಾರಿ ಆಕರ್ಷಕ ಮೀಟರಾಯ್ಡ್ ಗ್ರೇ ಮೆಟಾಲಿಕ್ ಬಣ್ಣವನ್ನು ಅಮೇಜ್ ಫೇಸ್‌ಲಿಫ್ಟ್ ಕಾರ್‌ನಲ್ಲಿ ಪರಿಚಯಿಸಿದೆ.

ನೂತನ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಸುಧಾರಿತ ಮತ್ತು ಹೊಸ ವಿನ್ಯಾಸದ ಎಲ್‌ಇಡಿ ಹೆಡ್‌ಲ್ಯಾಂಪ್, ಫಾಗ್‌ಲ್ಯಾಂಪ್, ಟಚ್ ಸೆನ್ಸರ್ ಆಧರಿತ ಸ್ಮಾರ್ಟ್ ಎಂಟ್ರಿ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.

ನೂತನ ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಆವೃತ್ತಿ ದರ ₹6,32,000 ದಿಂದ (ಎಕ್ಸ್ ಶೋ ರೂಂ, ದೆಹಲಿ) ಆರಂಭವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು