ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಕಂಪನಿಯು ಶುಕ್ರವಾರ ಹೊಸ ಎಸ್‌ಯುವಿ ‘ಅಲ್ಕಾಜಾರ್’ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ₹ 16.3 ಲಕ್ಷ, ಗರಿಷ್ಠ ಬೆಲೆ ₹ 19.99 ಲಕ್ಷ (ದೆಹಲಿ ಎಕ್ಸ್ ಷೋರೂಂ ಬೆಲೆ).

ಆರು ಹಾಗೂ ಏಳು ಆಸನಗಳ ಸಾಮರ್ಥ್ಯದಲ್ಲಿ ಈ ವಾಹನ ಲಭ್ಯವಿರಲಿದೆ. ಈ ವಾಹನದ ಬಿಡುಗಡೆ ನಂತರ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಕಂಪನಿಗೆ ಇದೆ. ವೆನ್ಯು, ಕ್ರೇಟಾ, ಟಕ್ಸನ್ ಎಸ್‌ಯುವಿ ವಾಹನಗಳನ್ನು ಹುಂಡೈ ಈಗಾಗಲೇ ಮಾರುಕಟ್ಟೆಗೆ ತಂದಿದೆ.

ಹೊಸ ಎಸ್‌ಯುವಿ ಅಭಿವೃದ್ಧಿಪಡಿಸಲು ₹ 650 ಕೋಟಿ ಹೂಡಿಕೆ ಮಾಡಿರುವುದಾಗಿ ಕಂಪನಿ ಹೇಳಿದೆ. ಅಲ್ಕಾಜಾರ್ ವಾಹನವು ಮಹೀಂದ್ರ ಎಕ್ಸ್‌ಯುವಿ 500, ಟಾಟಾ ಸಫಾರಿ, ಹೆಕ್ಟರ್ ಪ್ಲಸ್ ಜೊತೆ ಸ್ಪರ್ಧೆಗೆ ಇಳಿಯಲಿದೆ ಎಂಬುದು ಕಂಪನಿಯ ಹೇಳಿಕೆ.

2 ಲೀಟರ್ ಪೆಟ್ರೋಲ್ ಎಂಜಿನ್, 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಇದು ಗ್ರಾಹಕರಿಗೆ ಲಭ್ಯವಾಗಲಿದೆ. ಆಟೊಮ್ಯಾಟಿಕ್ ಹಾಗೂ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಗಳು ಕೂಡ ಇರಲಿವೆ. ಪೆಟ್ರೋಲ್ ಎಂಜಿನ್ ಇರುವ ಅಲ್ಕಾಜಾರ್ ಬೆಲೆಯು ₹ 16.3 ಲಕ್ಷದರಿಂದ ₹ 19.84 ಲಕ್ಷದ ನಡುವೆ ಇರಲಿದೆ. ಡೀಸೆಲ್ ಎಂಜಿನ್ ವಾಹನದ ಬೆಲೆಯು ₹ 16.53 ಲಕ್ಷದಿಂದ ₹ 19.99 ಲಕ್ಷದವರೆಗೆ ಇರಲಿದೆ.

ಈ ವರ್ಷದ ಜನವರಿ–ಮೇ ಅವಧಿಯಲ್ಲಿ ದೇಶದ ಎಸ್‌ಯುವಿ ಮಾರುಕಟ್ಟೆಯಲ್ಲಿ ಹುಂಡೈ ಕಂಪನಿಯ ಪಾಲು ಶೇಕಡ 23.3ರಷ್ಟು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.