ಶುಕ್ರವಾರ, ಆಗಸ್ಟ್ 19, 2022
22 °C

ಮಹೀಂದ್ರ ಸ್ಕಾರ್ಪಿಯೊ–ಎನ್‌: ಅರ್ಧಗಂಟೆಯೊಳಗೆ 1 ಲಕ್ಷಕ್ಕೂ ಅಧಿಕ ಬುಕಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಹೊಸ ಸ್ಕಾರ್ಪಿಯೊ–ಎನ್‌ ಎಸ್‌ಯುವಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕಿಂಗ್ ಆರಂಭಿಸಿದ ಅರ್ಧ ಗಂಟೆಯ ಒಳಗಾಗಿ 1 ಲಕ್ಷಕ್ಕೂ ಅಧಿಕ ಬುಕಿಂಗ್‌ ಆಗಿದೆ ಎಂದು ಕಂಪನಿಯು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ 26ರಿಂದ ಗ್ರಾಹಕರಿಗೆ ಹೊಸ ಎಸ್‌ಯುವಿ ವಿತರಣೆ ಆರಂಭ ಆಗಲಿದೆ ಎಂದು ಕಂಪನಿಯು ಹೇಳಿದೆ.

ಕಂಪನಿಯು ಇದೇ 27ರಂದು ಸ್ಕಾರ್ಪಿಯೊ–ಎನ್‌ ಬಿಡುಗಡೆ ಮಾಡಿದ್ದು, ಇದರ ಎಕ್ಸ್‌ ಷೋರೂಂ ಬೆಲೆ ₹ 11.99 ಲಕ್ಷದಿಂದ ಶುರುವಾಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಆಯ್ಕೆಗಳನ್ನು ಇದು ಹೊಂದಿದ್ದು, ಮ್ಯಾನುವಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೂ ಲಭ್ಯವಿರಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು