ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರ 'ಥಾರ್‌ 2020' ಬಿಡುಗಡೆ: ಆರಂಭಿಕ ಬೆಲೆ ₹9.8 ಲಕ್ಷ

Last Updated 2 ಅಕ್ಟೋಬರ್ 2020, 10:22 IST
ಅಕ್ಷರ ಗಾತ್ರ
ADVERTISEMENT
""

ಮಹೀಂದ್ರ ಕಂಪನಿಯು ಹೊಸ ಎಸ್‌ಯುವಿ 'ಥಾರ್‌ 2020' ಅಧಿಕೃತ ಬಿಡುಗಡೆಯ ಜೊತೆಗೆ ಬೆಲೆ ಬಹಿರಂಗ ಪಡಿಸಿದೆ. ಆಗಸ್ಟ್‌ 15ರಂದು ಅನಾವರಣಗೊಂಡಿದ್ದ ಸೆಕೆಂಡ್‌ ಜನರೇಷನ್‌ ಥಾರ್‌ನ ಬೆಲೆ ಹೊರತಾಗಿ, ವಾಹನ ಸಾಮರ್ಥ್ಯದ ಸಂಪೂರ್ಣ ಮಾಹಿತಿ ಪ್ರಕಟಿಸಲಾಗಿತ್ತು‌.

ಮಹೀಂದ್ರ ಥಾರ್‌ ಎಎಕ್ಸ್‌ ಮಾದರಿಯ ಬೆಲೆ ₹9.8 ಲಕ್ಷದಿಂದ ₹12.2 ಲಕ್ಷದ ವರೆಗೂ ನಿಗದಿಯಾಗಿದೆ. ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುವ 'ಎಲ್‌ಎಕ್ಸ್‌' ಮಾದರಿಯ ಹಾರ್ಡ್‌–ಟಾಪ್‌ ಕನ್‌ವರ್ಟಿಬಲ್‌ ಥಾರ್‌ಗೆ ₹12.49 ಲಕ್ಷ ಇದೆ ಹಾಗೂ ಡೀಸೆಲ್‌ ಮಾದರಿಗೆ ₹12.95 ಲಕ್ಷ ನಿಗದಿಯಾಗಿದೆ.

ಹೊಸ ಥಾರ್‌ ಮೊದಲ ಯೂನಿಟ್‌ನ್ನು ಹರಾಜು ಪ್ರಕ್ರಿಯೆ ಮೂಲಕ ₹1.10 ಕೋಟಿಗೆ ಮಾರಾಟ ಮಾಡಲಾಗಿದ್ದು, ದೆಹಲಿಯ ಆಕಾಶ್ ಮಿಂದ ಎಂಬುವವರು ಮೊದಲ ಥಾರ್‌ ಪಡೆದುಕೊಂಡಿದ್ದಾರೆ. ಥಾರ್‌ ಖರೀದಿಗೆ ಬುಕ್ಕಿಂಗ್‌ ಆರಂಭಿಸಲಾಗಿದ್ದು, ಇದೇ ತಿಂಗಳ ಕೊನೆಯ ವಾರದಿಂದ ವಾಹನ ಗ್ರಾಹಕರಿಗೆ ತಲುಪುವ ಸಾಧ್ಯತೆಯಿದೆ.

ಥಾರ್‌ ಎಸ್‌ಯುವಿಯ ಹೊರ ಮತ್ತು ಒಳಗಿನ ವಿನ್ಯಾಸ ಬಹುತೇಕ ಬದಲಾಗಿದೆ. ಆರು ಸ್ಪೀಡ್‌ ಮ್ಯಾನುಯಲ್‌ ಮತ್ತು ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್ಸ್ ಆಯ್ಕೆಗಳಿವೆ.

ಶುಕ್ರವಾರ ಬೆಂಗಳೂರಿನ ಅನಂತ್‌ ಕಾರ್ಸ್‌ನಲ್ಲಿ ಬಿಡುಗಡೆಯಾದ ಎಸ್‌ಯುವಿ ವರ್ಗದ ಮಹೀಂದ್ರ ಥಾರ್‌ ಜೊತೆಯಲ್ಲಿ ಸಂಸ್ಥೆಯ ಸಿಇಒ ಸಿ.ಭಾಸ್ಕರ್‌ ರಾಜು ಇದ್ದಾರೆ

ಹೊಸ ಥಾರ್‌ ವೈಶಿಷ್ಟ್ಯಗಳು:

* ಬಿಎಸ್‌6 ಎಂಜಿನ್‌: 2.0 ಲೀಟರ್‌ ಪೆಟ್ರೋಲ್‌ ಮತ್ತು 2.2 ಲೀಟರ್‌ ಡೀಸೆಲ್ ಎಂಜಿನ್ (ಎಂಹಾಕ್‌)
* ಸಾಮರ್ಥ್ಯ: ಡೀಸೆಲ್‌ ಎಂಜಿನ್‌ 120 ಎಚ್‌ಪಿ ಪವರ್‌ ಹೊಮ್ಮಿಸುತ್ತದೆ; ಪೆಟ್ರೋಲ್‌ ಎಂಜಿನ್‌ಗೆ 150 ಎಚ್‌ಪಿ ಪವರ್‌ ಸಾಮರ್ಥ್ಯವಿದೆ
* ಹೊಸ ಗಿಯರ್‌ ಬಾಕ್ಸ್‌; 6 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಮತ್ತು 6 ಸ್ಪೀಡ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌
* ಆಸನಗಳ ಆಯ್ಕೆ: 4 ಫ್ರಂಟ್‌ ಫೇಸಿಂಗ್‌ ಸೀಟ್‌ಗಳು ಮತ್ತು 2+4 ಸೈಡ್‌ ಫೇಸಿಂಗ್‌ ಸೀಟ್‌ಗಳು
* 17.8 ಇಂಚು ಟಚ್‌ಸ್ಕ್ರೀನ್‌ ಇನ್ಫೊಟೇನ್‌ಮೆಂಟ್‌ ಸಿಸ್ಟಂ
* ರೂಫ್ ಮೌಂಟೆಡ್‌ ಸ್ಪೀಕರ್‌
* ಡ್ಯುಯಲ್‌ ಏರ್‌ಬ್ಯಾಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT