ಗುರುವಾರ , ಮಾರ್ಚ್ 30, 2023
21 °C

₹11 ಸಾವಿರಕ್ಕೆ ಹೊಸ ‘ಸೆಲೆರಿಯೊ’ ಬುಕಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ‘ಸೆಲೆರಿಯೊ’ದ ಹೊಸ ಆವೃತ್ತಿಯ ಪ್ರೀ–ಲಾಂಚ್ ಬುಕಿಂಗ್ ಆರಂಭಿಸಿರುವುದಾಗಿ ಮಂಗಳವಾರ ತಿಳಿಸಿದೆ.

₹ 11 ಸಾವಿರ ಆರಂಭಿಕ ಮೊತ್ತ ಕೊಟ್ಟು ಹೊಸ ಸೆಲೆರಿಯೊ ಬುಕ್ ಮಾಡಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದಲ್ಲಿಯೇ ಮೊದಲನೆಯ ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ನೆಕ್ಸ್ಟ್‌-ಜೆನ್ ಕೆ-ಸೀರೀಸ್ ಎಂಜಿನ್‌ಅನ್ನು ಈ ಕಾರು ಹೊಂದಿದೆ. ಇದು ಭಾರತದಲ್ಲಿ ಹೆಚ್ಚು ಇಂಧನ ಕ್ಷಮತೆಯ ಪೆಟ್ರೋಲ್ ಕಾರು ಆಗಿರುತ್ತದೆ ಎಂದು ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಸಿ.ವಿ. ರಮಣ್‌ ಹೇಳಿದ್ದಾರೆ.

ತನ್ನ ವಿಶಿಷ್ಟ್ಯ ಶೈಲಿ ಮತ್ತು ಕ್ರಾಂತಿಕಾರಿ ಆಟೊ ಗಿಯರ್‌ ಶಿಫ್ಟ್‌ (ಎಜಿಎಸ್‌) ತಂತ್ರಜ್ಞಾನದಿಂದಾಗಿ, ಬಿಡುಗಡೆ ಆದಾಗಿನಿಂದ ‘ಸೆಲೆರಿಯೊ’ ಕಾರು ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸಿದೆ. ಸೆಲೆರಿಯೊ ಬ್ರ್ಯಾಂಡ್‌ ಅಂದಿನಿಂದ ಹೊಸ ಯುಗದ ತಂತ್ರಜ್ಞಾನ, ಆಧುನಿಕ ವಿನ್ಯಾಸ ಮತ್ತು ಪ್ರಯೋಗಶೀಲತೆಗೆ ತೆರೆದುಕೊಳ್ಳುತ್ತಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.