ಸೋಮವಾರ, ಆಗಸ್ಟ್ 10, 2020
26 °C
ಶುಕ್ರವಾರದಿಂದ ಮುಂಗಡ ಬುಕ್ಕಿಂಗ್‌ ಆರಂಭ

ಆಗಸ್ಟ್‌ ಮೊದಲ ವಾರ ಮಾರುಕಟ್ಟೆಗೆ ಮಾರುತಿ ಎಸ್‌–ಕ್ರಾಸ್‌ ಪೆಟ್ರೋಲ್‌ ಕಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಬಹು ನಿರೀಕ್ಷಿತ ‘ಎಸ್‌–ಕ್ರಾಸ್’ ಪೆಟ್ರೋಲ್ ‌‌ಕಾರು  ಆಗಸ್ಟ್‌ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರಲಿದೆ. ಕಾರಿನ ಮುಂಗಡ ಬುಕ್ಕಿಂಗ್‌ ಶುಕ್ರವಾರದಿಂದ ಆರಂಭವಾಗಿದೆ.

ನಿರೀಕ್ಷೆ ಹುಟ್ಟು ಹಾಕಿರುವ ಎಸ್‌–ಕ್ರಾಸ್‌ ಪೆಟ್ರೋಲ್ ಆವೃತ್ತಿ ಸಿಗ್ಮಾ, ಡೆಲ್ಟಾ, ಝೇಟಾ ಮತ್ತು ಅಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯ. 

ಹೈಬ್ರಿಡ್‌ ತಂತ್ರಜ್ಞಾನದ ಕೆ–ಸೀರೀಸ್‌ ಎಂಜಿನ್ ಪ್ರಮುಖ ಹೈಲೈಟ್‌. ಅಪಘಾತದ ವೇಳೆ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲಾಗಿದೆ. 1.5 ಲೀಟರ್ ಸಾಮರ್ಥ್ಯದ ಎಂಜಿನ್‌ ಮತ್ತು ಆಕರ್ಷಕ ವಿನ್ಯಾಸದ ಕ್ಯಾಬಿನ್‌ನಿಂದಾಗಿ‌ ಮಾರುತಿ ಎಸ್‌–ಕ್ರಾಸ್ ಪೆಟ್ರೋಲ್‌ ಕಾರು ಭಾರಿ ನಿರೀಕ್ಷೆ ಮೂಡಿಸಿದೆ. 

₹11 ಸಾವಿರ  ಪಾವತಿಸಿ ಮಾರುತಿ ನೆಕ್ಸಾ ಷೊ ರೂಂಗಳಲ್ಲಿ ಬುಕ್‌ ಮಾಡಬಹುದು ಎಂದು ಕಂಪನಿ ಹೇಳಿದೆ. 2015ರಲ್ಲಿ ಮಾರುತಿ ಎಸ್‌–ಕ್ರಾಸ್‌ ಡೀಸೆಲ್‌ ಕಾರು ಕೂಡ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು