ಬುಧವಾರ, ಜೂನ್ 29, 2022
24 °C

Scorpio-N| ಸ್ಕಾರ್ಪಿಯೊ–ಎನ್ ಜೂನ್ 27ಕ್ಕೆ ಅನಾವರಣ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ತನ್ನ ಹೊಸ ಎಸ್‌ಯುವಿ ‘ಸ್ಕಾರ್ಪಿಯೊ–ಎನ್‌’ಅನ್ನು ಜೂನ್‌ 27ರಂದು ಅನಾವರಣ ಮಾಡಲಿದೆ.

ಈಗ ಮಾರುಕಟ್ಟೆಯಲ್ಲಿ ಇರುವ ಸ್ಕಾರ್ಪಿಯೊ ವಾಹನವು ‘ಸ್ಕಾರ್ಪಿಯೊ ಕ್ಲಾಸಿಕ್’ ಹೆಸರಿನಲ್ಲಿ ಮುಂದುವರಿಯಲಿದೆ. ‘ಹೊಸ ಸ್ಕಾರ್ಪಿಯೊ–ಎನ್‌ ವಾಹನವು ಎಸ್‌ಯುವಿ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ’ ಎಂದು ಕಂಪನಿಯ ಆಟೊಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ನಕ್ರಾ ಹೇಳಿದ್ದಾರೆ.

ಹೊಸ ಎಸ್‌ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಅಲ್ಲದೆ, ಮ್ಯಾನುವಲ್ ಹಾಗೂ ಆಟೊಮ್ಯಾಟಿಕ್ ಆಯ್ಕೆಗಳೂ ಇದರಲ್ಲಿ ಇರಲಿವೆ.

ಈ ಎಸ್‌ಯುವಿಯನ್ನು ಚೆನ್ನೈ ಸಮೀಪದ ಮಹೀಂದ್ರ ರಿಸರ್ಚ್‌ ವ್ಯಾಲಿಯಲ್ಲಿ, ಅಮೆರಿಕದ ಮಹೀಂದ್ರ ತಾಂತ್ರಿಕ ಕೇಂದ್ರದಲ್ಲಿ ಹಾಗೂ ಮುಂಬೈನಲ್ಲಿ ಇರುವ ಮಹೀಂದ್ರ ಡಿಸೈನ್ ಸ್ಟುಡಿಯೊದಲ್ಲಿ ವಿನ್ಯಾಸಗೊಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು