ಸೋಮವಾರ, ಆಗಸ್ಟ್ 8, 2022
22 °C

ಹೊಸ ರೇಂಜ್‌ ರೋವರ್‌ ವೆಲಾರ್‌: ಬೆಲೆ ₹ 79.87 ಲಕ್ಷದಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಂಪನಿಯು ಭಾರತದಲ್ಲಿ ತನ್ನ ಸುಧಾರಿತ ರೇಂಜ್‌ ರೋವರ್‌ ವೆಲಾರ್‌ ಎಸ್‌ಯುವಿ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆಯು ₹ 79.87 ಲಕ್ಷದಿಂದ ಆರಂಭವಾಗುತ್ತದೆ.

ಹೊಸ ವೆಲಾರ್‌ ಆರ್‌–ಡೈನಾಮಿಕ್‌ ಎಸ್‌ ಟ್ರಿಮ್‌, 2 ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಏರ್ ಸಸ್ಪೆನ್ಶನ್‌, 3ಡಿ ಸರೌಂಡ್‌ ಕ್ಯಾಮೆರಾ ಮತ್ತು ಪಿವಿ ಪ್ರೊ ಎನ್ಫೊಟೇನ್‌ಮೆಂಟ್‌ ವ್ಯವಸ್ಥೆಯಂತಹ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. 

‘ರೇಂಜ್‌ ರೋವರ್‌ ವೆಲಾರ್‌ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಎಸ್‌ಯುವಿ ಆಗಿದೆ. ಹೊಸ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಅವತಾರದ ಈ ಎಸ್‌ಯುವಿ ಎಂದಿಗಿಂತಲೂ ಹೆಚ್ಚು ಅಪೇಕ್ಷಣೀಯ ಆಗಿದೆ’ ಎಂದು ಕಂಪನಿಯ ಅಧ್ಯಕ್ಷ ರೋಹಿತ್‌ ಸೂರಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು