ಗುರುವಾರ , ಏಪ್ರಿಲ್ 15, 2021
19 °C

ಥರ್ಡ್‌ ಪಾರ್ಟಿ ವಿಮೆ ಪ್ರೀಮಿಯಂನಲ್ಲಿ ಉಳಿತಾಯ

ಸಜ್ಜಾ ಪ್ರವೀಣ ಚೌಧರಿ Updated:

ಅಕ್ಷರ ಗಾತ್ರ : | |

Prajavani

ಮುಂದಿನ 8ರಿಂದ 10 ತಿಂಗಳುಗಳಲ್ಲಿ ಇಡೀ ದೇಶದಾದ್ಯಂತ  ಕೋವಿಡ್‌–19 ವಿರುದ್ಧದ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ, ಒಂದೊಮ್ಮೆ ಭಾರತ, ‘ಕೋವಿಡ್‌–19‘ರಿಂದ ಮುಕ್ತವಾಗುತ್ತಿದ್ದಂತೆ, 2020ರ ಮುಂಚಿನ ಸಹಜ ಸ್ಥಿತಿಯು ಎಲ್ಲೆಡೆ ಮರಳಲಿದೆ. ಮನೆಯಿಂದ ಅಥವಾ ಎಲ್ಲಿಂದಲಾದರೂ ಕೆಲಸ ಮಾಡುವ ಸಾಮರ್ಥ್ಯವನ್ನು ‘ಕೋವಿಡ್‌–19‘ ಪಿಡುಗು ಜನರಿಗೆ ಒದಗಿಸಿದೆ, ಎಲ್ಲಕ್ಕಿಂತ ಹೆಚ್ಚಾಗಿ ಹೇಳುವುದಾದರೆ, ಇತ್ತೀಚಿನ ಬಿಸಿಜಿಯ ‘ಭವಿಷ್ಯದ ಕೆಲಸದ ತಾಣ‘ ವರದಿ ಪ್ರಕಾರ, ಭವಿಷ್ಯದಲ್ಲಿ ತಮ್ಮ ಉದ್ಯೋಗಿಗಳಲ್ಲಿ ಶೇ 40ರಷ್ಟು ಜನರು ಮನೆಯಿಂದಲೇ ಕೆಲಸ ಮಾಡಲು ಒಲವು ಹೊಂದಿದ್ದಾರೆ ಎಂದು ಬಹುತೇಕ ಕಾರ್ಪೊರೇಟ್‌ ಸಂಸ್ಥೆಗಳು ತಿಳಿಸಿವೆ.

ಪ್ರತಿದಿನ ವಾಹನ ಬಳಕೆಯಲ್ಲಿ ಗಮನಾರ್ಹ ಇಳಿಕೆ
ಹೆಚ್ಚೆಚ್ಚು ಜನರು ಮನೆಯಿಂದಲೇ ಕಾರ್ಯನಿರ್ವಹಿಸುವುದು ಎಂದರೆ, ಗಮನಾರ್ಹ ಸಂಖ್ಯೆಯ ಕಾರ್‌ಗಳು ರಸ್ತೆಯಿಂದ ದೂರ ಉಳಿಯಲಿವೆ ಎಂದೇ ಅರ್ಥ.  ಅದರಿಂದ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ.  ಒಂದೊಮ್ಮೆ ನೀವು ಪ್ರತಿ ದಿನ ಕಚೇರಿಗೆ ನಿಮ್ಮ ಕಾರನ್ನು ಚಲಾಯಿಸಿಕೊಂಡು ಹೋಗುವುದಿಲ್ಲ ಎಂದರೆ, ನೀವು ಸಮಗ್ರ ಸ್ವರೂಪದ ಕಾರ್‌ ವಿಮೆ ಪಾಲಿಸಿಗಳಲ್ಲಿ ಹಣ ತೊಡಗಿಸುವ ಅಗತ್ಯವೂ ಇಲ್ಲ ಎಂದೂ ವ್ಯಾಖ್ಯಾನಿಸಬೇಕಾಗುತ್ತದೆ. ಪ್ರತಿ ದಿನ ಕಚೇರಿಗೆ ಹೋಗಿ ಬರುವ ಮಾರ್ಗ ಮಧ್ಯೆ ಆಕಸ್ಮಿಕವಾಗಿ ಸಂಭವಿಸುವ ಬಹುತೇಕ ಅಪಘಾತಗಳಿಂದ ಕಾರ್‌ಗೆ ಆಗುವ ಹಾನಿಯ ವಿರುದ್ಧ ವಿಮೆ ಪಡೆಯುವ ಅನಿವಾರ್ಯತೆಯೇ ಉದ್ಭವಿಸುವುದಿಲ್ಲ.  ಮುಂದಿನ 7 ರಿಂದ 8 ತಿಂಗಳವರೆಗೆ ತಾವು ಮನೆಯಲ್ಲಿಯೇ ಕಾರ್ಯನಿರ್ವಹಿಸಲಿರುವುದರಿಂದ ಸಾಧ್ಯವಿರುವಷ್ಟರ ಮಟ್ಟಿಗೆ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ವಿಮೆ ಸೌಲಭ್ಯ ಒದಗಿಸುವ ವಿಮೆ ಯೋಜನೆಗಳ ಬಗ್ಗೆ ಜನರು ಸದ್ಯದ ದಿನಗಳಲ್ಲಿ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇಂತಹ ವಿಮೆ ಯೋಜನೆಗಳ ಬಗ್ಗೆಯೇ ಇಲ್ಲಿ ವಿವರಿಸಲಾಗಿದೆ.

ಸರ್ಕಾರದ ನಿಯಮಗಳ ಅನ್ವಯ, ವಾಹನ ಮಾಲೀಕರು ತಮ್ಮ  ವಾಹನಕ್ಕೆ ಥರ್ಡ್‌ಪಾರ್ಟಿ ವಿಮೆ (Third Party cover) ಹೊಂದುವುದು ಕಡ್ಡಾಯವಾಗಿದೆ. ಸ್ವಂತಕ್ಕೆ ಆಗುವ ಹಾನಿ – ನಷ್ಟದ ವಿರುದ್ಧ ವಿಮೆ ಹೊಂದುವುದು ವಾಹನ ಮಾಲೀಕರ ಇಷ್ಟಾನಿಷ್ಟಕ್ಕೆ ಒಳಪಟ್ಟಿರುತ್ತದೆ. ಮನೆಯಿಂದಲೇ ಕೆಲಸ ಮಾಡುವವರು ಸದ್ಯಕ್ಕೆ   ಕಚೇರಿಗೆ ಹೋಗಿ ಬರುವುದಕ್ಕೆ ಸ್ವಂತದ ಕಾರ್‌   ಬಳಸುವ ಅಗತ್ಯ ಇಲ್ಲ. ಅಪಘಾತಗಳಿಂದ ವಾಹನಕ್ಕೆ ಆಗುವ ನಷ್ಟದ ಬಗ್ಗೆ ನೀವು ಈಗ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ, ಕಡ್ಡಾಯವಾಗಿರುವ ಥರ್ಡ್‌ ಪಾರ್ಟಿ ವಿಮೆ ಪಡೆಯುವುದು ಅಗತ್ಯವಾಗಿದೆ.

ನಿಮ್ಮ ಕಾರ್‌ ನಿಮ್ಮ ಮನೆಯ ಆವರಣದಲ್ಲಿ ನಿಲ್ಲಿಸಿರುವಾಗ ಕೆಲವೊಂದು ಬಗೆಯ ಹಾನಿ ಆಗುವ ಸಾಧ್ಯತೆಗಳೂ ಇದ್ದೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಆಗುವ ನಷ್ಟದ ಪರಿಹಾರ ಪಡೆಯಲು ವಿಮೆ ಪಾಲಿಸಿ ಹೊಂದುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿರುತ್ತದೆ. ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಕಾರ್‌ ಕಳ್ಳತನವಾಗುವುದು ಸಾಮಾನ್ಯ ಬಗೆಯ ಘಟನೆಯಾಗಿರುತ್ತದೆ.  ವರ್ಷದಿಂದ ವರ್ಷಕ್ಕೆ ವಾಹನಗಳ ಕಳ್ಳತನ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಭಾರತದಲ್ಲಿ ವಾಹನಗಳ ಕಳ್ಳತನದ ಅಪರಾಧ ಕೃತ್ಯಗಳಲ್ಲಿ ಗಮನಾರ್ಹ ಏರಿಕೆ ಕಂಡು ಬರುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರವೇ, ದೇಶದಾದ್ಯಂತ ಪ್ರತಿ ದಿನ ಕಾರ್‌ ಕಳ್ಳತನದ 100 ಪ್ರಕರಣಗಳು ವರದಿಯಾಗುತ್ತವೆ. ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಲೇ ಇವೆ, ಅದೇ ರೀತಿ, ಬೆಂಕಿ ಆಕಸ್ಮಿಕದ ಘಟನೆಗಳೂ ಸಾಮಾನ್ಯವಾಗಿವೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರ್‌ಗಳಲ್ಲಿ ಅನೇಕ ಕಾರಣಗಳಿಗಾಗಿ ದಿಢೀರನೆ ಬೆಂಕಿ ಕಾಣಿಸಿಕೊಳ್ಳುವುದು ಕಂಡುಬರುತ್ತಿದೆ. ಇದರಿಂದ ಕಾರ್‌ಗಳಿಗೆ ಗಮನಾರ್ಹ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತದೆ.

ಥರ್ಡ್‌ಪಾರ್ಟಿ + ಬೆಂಕಿ + ಕಳ್ಳತನ ವಿರುದ್ಧದ ವಿಮೆ ಪರಿಹಾರ ಮೂಲಕ ನಿಮ್ಮ ಪ್ರೀಮಿಯಂನಲ್ಲಿ ಹಣ ಉಳಿಸಿ
ಕಾರ್‌ ಕಳ್ಳತನ ಮತ್ತು ಕಾರ್‌ಗಳಲ್ಲಿ ಬೆಂಕಿ ಆಕಸ್ಮಿಕಗಳು ಕಂಡುಬರುವುದು ವಾಸ್ತವ ಸಂಗತಿಯಾಗಿದೆ.  ಮೇಲಿಂದ ಮೇಲೆ  ಇಂಥಹ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಬೆಂಕಿ ಆಕಸ್ಮಿಕದಿಂದ ನಿಮ್ಮ ಕಾರ್‌ಗೆ ನಷ್ಟ ಉಂಟಾದಾಗ ಅಥವಾ ಕಳ್ಳತನವಾದಾಗ ಆಘಾತಕ್ಕೆ ಒಳಗಾಗುವುದಕ್ಕಿಂತ ಅಂತಹ ಯಾವುದೇ ಬಗೆಯ ಪ್ರತಿಕೂಲ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆಯಲ್ಲಿರುವುದು ಉತ್ತಮ ನಿರ್ಧಾರವಾಗಿರಲಿದೆ. ಕಾರ್‌ಗೆ ಹಾನಿ ಉಂಟು ಮಾಡಿದ ಅಥವಾ ಕಳ್ಳತನ ಮಾಡಿದವರನ್ನು ಪತ್ತೆಹಚ್ಚಲು ನಿಮ್ಮಿಂದ ಸಾಧ್ಯವಿಲ್ಲದಿರುವಾಗ ಥರ್ಡ್‌ ಪಾರ್ಟಿ + ಬೆಂಕಿ + ಕಳ್ಳತನ ವಿರುದ್ಧ ವಿಮೆ ಪಾಲಿಸಿ ಪಡೆಯುವುದರಿಂದ ನಿಮ್ಮ ಮೋಟರ್‌ ವಿಮೆ ಕಂಪನಿಯು ಇಂತಹ ಸಂದರ್ಭದಲ್ಲಿನ ಹಾನಿಗಳಿಗೆ ಸೂಕ್ತ ಪರಿಹಾರ ಒದಗಿಸುತ್ತದೆ, ಇಂತಹ ವಿಮೆ ಪಾಲಿಸಿಗಳ ಮೂಲಕ ಗ್ರಾಹಕರಿಗೆ ನೆರವಾಗಲಿರುವ ಪಾಲಿಸಿಬಜಾರ್‌ (Policybazaar), ಆನ್‌ಲೈನ್‌ನಲ್ಲಿಯೇ ವಿಮೆ ಪರಿಹಾರ ಉತ್ಪನ್ನಗಳನ್ನು ಒದಗಿಸುತ್ತಿದೆ.  ಇಂತಹ ವಿಮೆ ಪರಿಹಾರ ಯೋಜನೆಯು ಥರ್ಡ್‌ಪಾರ್ಟಿ ವಿಮೆ ಮತ್ತು ಬೆಂಕಿ ಆಕಸ್ಮಿಕ ಹಾಗೂ ಕಳ್ಳತನದ ವಿರುದ್ಧದ ಸಮಗ್ರ ಸ್ವರೂಪದ ವಿಮೆ ಪರಿಹಾರ ಒಳಗೊಂಡಿರಲಿದೆ. ಇಂತಹ ವಿಮೆ ಪರಿಹಾರ ಯೋಜನೆಗಳನ್ನು ಸಾಮಾನ್ಯವಾಗಿ ಥರ್ಡ್‌ಪಾರ್ಟಿ+ಬೆಂಕಿ+ಕಳ್ಳತನ ವಿರುದ್ಧದ ವಿಮೆ ಪರಿಹಾರ ಒದಗಿಸುವ (TP + Fire + Theft Insurance Cover) ಸಂಯೋಜಿತ ಯೋಜನೆಗಳು ಎಂದು ಕರೆಯಲಾಗುತ್ತದೆ. ಈ ವಿಮೆ ಯೋಜನೆಗಳು ಕಡಿಮೆ ವೆಚ್ಚದಲ್ಲಿ ದೊರೆಯಲಿರುವುದು ಎಲ್ಲಕ್ಕಿಂತ ಮುಖ್ಯವಾಗಿದೆ. ನಿಯಮಿತ ಸ್ವರೂಪದ ಸಮಗ್ರ ಮೋಟರ್‌ ವಿಮೆ ಯೋಜನೆಗಳಿಗೆ ಮಾಡುವ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಇಂತಹ ಸಂಯೋಜಿತ ವಿಮೆ ಪರಿಹಾರ ದೊರೆಯಲಿರುವುದೇ ಇವುಗಳ ವಿಶೇಷತೆಯಾಗಿದೆ.

ಲೇಖಕ: ಸಜ್ಜಾ ಪ್ರವೀಣ ಚೌಧರಿ
(ಪಾಲಿಸಿಬಜಾರ್‌ಡಾಟ್‌ಕಾಂನ ವಾಹನ ವಿಮೆ ಮುಖ್ಯಸ್ಥ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು