ಶನಿವಾರ, ಫೆಬ್ರವರಿ 22, 2020
19 °C

ಸ್ಲೋ ಸ್ಪೀಡ್ ಇ-ಸ್ಕೂಟರ್ ‘ಲೈಟ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಕಿನವಾ ಸಂಸ್ಥೆಯು ಯುವಜನತೆಗಾಗಿ ಮಾಲಿನ್ಯರಹಿತ ವಿನೂತನ ಸ್ಲೋ ಸ್ಪೀಡ್ ಇ-ಸ್ಕೂಟರ್ ‘ಲೈಟ್’ (LITE) ಬಿಡುಗಡೆ ಮಾಡಿದೆ. ಇದರ ಎಕ್ಸ್‌ಷೋರೂಮ್ ಬೆಲೆ ₹59,990. ಯುವ ಸಮೂಹವನ್ನು ಗುರಿಯಾಗಿಸಿ ಪರಿಚಯಿಸಿರುವ ‘ಲೈಟ್’ ಇ-ಸ್ಕೂಟರ್, ಇಟಾಲಿಯನ್ ವಿನ್ಯಾಸ ಹೊಂದಿದ್ದು ಪ್ರಕಾಶಮಾನ ಬಿಳಿ (Sparkle White) ಮತ್ತು ಪ್ರಕಾಶಮಾನ ನೀಲಿ (Sparkle Blue) ವರ್ಣಗಳಲ್ಲಿ ಲಭ್ಯ ಇದೆ.

ಎಲ್ಲರೂ ಸುಲಭವಾಗಿ ಚಾಲನೆ ಮಾಡುವ ರೀತಿಯಲ್ಲಿ ಇದರ ವಿನ್ಯಾಸ ರೂಪಿಸಲಾಗಿದೆ. ಕಳಚಬಹುದಾದ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಗ್ರಾಹಕರಿಗೆ ಹಣದ ಉಳಿತಾಯ ಮಾಡುವುದರ ಜತೆಗೆ ‘ಲೈಟ್’ ಪರಿಸರ ಸ್ನೇಹಿ ಕೂಡ ಆಗಿದೆ. 3 ವರ್ಷಗಳ ಮೋಟರ್ ಮತ್ತು ಬ್ಯಾಟರಿ ವಾರಂಟಿ ಒದಗಿಸಲಾಗುವುದು. ಬ್ಯಾಟರಿಯನ್ನು ಕಳ್ಳರಿಂದ ರಕ್ಷಿಸಲು ಆ್ಯಂಟಿ-ಥೆಫ್ಟ್ ಸೌಲಭ್ಯ ಅಳವಡಿಸಲಾಗಿದೆ. ಇದರಿಂದ ಬ್ಯಾಟರಿಯ ಕಳ್ಳತನ ಮಾಡಲು ಸಾಧ್ಯವಾಗುವುದೇ ಇಲ್ಲ.

ಎಲ್ಇಡಿ ಸ್ಪೀಡೊಮೀಟರ್, ಎಲ್ಇಡಿ ಹೆಡ್‌ಲೈಟ್‌, ಎಲ್ಇಡಿ ವಿಂಕರ್ಸ್, ಎಲ್ಇಡಿ ಹಿಂಬದಿ ಲೈಟ್, ಅಟೋಮ್ಯಾಟಿಕ್ ಎಲೆಕ್ಟ್ರಿಕ್ ಹ್ಯಾಂಡಲ್, ಸೆಲ್ಫ್ ಸ್ಟಾರ್ಟ್ ಪುಷ್‌ ಬಟನ್, ಫ್ರಂಟ್ ಸಸ್ಪೆಂಷನ್ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

‘ಪೆಟ್ರೋಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನವು ಕಡಿಮೆ ದಕ್ಷತೆ ಹೊಂದಿರುತ್ತದೆ ಎನ್ನುವ ನಂಬಿಕೆ ದೂರ ಮಾಡಿದ್ದೇವೆ. ಯುವ ಸಮೂಹ, ಮಹಿಳೆಯರು ಮತ್ತು ವಯಸ್ಕರಿಗೂ ಸಹ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ’ ಎಂದು ಒಕಿನವಾ ಆಟೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಜೀತೇಂದ್ರ ಶರ್ಮ ಹೇಳುತ್ತಾರೆ. 

ರಫ್ತು ಹೆಚ್ಚಳ

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು