ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೋಟ ರೂಮಿಯನ್‌ ಬುಕಿಂಗ್ ಆರಂಭ: ಎಕ್ಸ್‌ ಷೋರೂಂ ಬೆಲೆ, ವಿವರ ಇಲ್ಲಿದೆ

ಟೊಯೋಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ತನ್ನ ಹೊಸ ಕಾರು ‘ರೂಮಿಯನ್‌’ ಬೆಲೆಯನ್ನು ಘೋಷಿಸಿದ್ದು, ಬುಕಿಂಗ್‌ ಆರಂಭ ಮಾಡಿದೆ.
Published 28 ಆಗಸ್ಟ್ 2023, 13:24 IST
Last Updated 28 ಆಗಸ್ಟ್ 2023, 13:24 IST
ಅಕ್ಷರ ಗಾತ್ರ

ಬೆಂಗಳೂರು: ಟೊಯೋಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ತನ್ನ ಹೊಸ ಕಾರು ‘ರೂಮಿಯನ್‌’ ಬೆಲೆಯನ್ನು ಘೋಷಿಸಿದ್ದು, ಬುಕಿಂಗ್‌ ಆರಂಭ ಮಾಡಿದೆ.

ಹೊಸ ಬಿ–ಎಂಪಿವಿಯ ಎಕ್ಸ್‌ ಷೋರೂಂ ಬೆಲೆ ₹10.29 ಲಕ್ಷದಿಂದ ಆರಂಭ ಆಗುತ್ತದೆ. ₹11 ಸಾವಿರ ಪಾವತಿಸಿ ಬುಕ್ ಮಾಡಬಹುದು ಎಂದು ಕಂಪನಿ ಹೇಳಿದೆ.

7 ಆಸನಗಳ ಎಂಪಿವಿ 1.5 ಲೀಟರ್‌ ಕೆ–ಸಿರೀಸ್‌ನ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು, ನಿಯೋ ಡ್ರೈವ್ ತಂತ್ರಜ್ಞಾನ ಮತ್ತು ಇ–ಸಿಎನ್‌ಜಿ ತಂತ್ರಜ್ಞಾನ ಒಳಗೊಂಡಿದೆ. ಪೆಟ್ರೋಲ್‌ ಆವೃತ್ತಿಯು ಪ್ರತಿ ಲೀಟರಿಗೆ 20.51 ಕಿಲೋ ಮೀಟರ್‌ ಮತ್ತು ಸಿಎನ್‌ಜಿ ಆವೃತ್ತಿಯು ಕೆ.ಜಿಗೆ 26.11 ಕಿಲೋ ಮೀಟರ್‌ ಇಂಧನ ಕ್ಷಮತೆಯನ್ನು ಹೊಂದಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT