ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈ ವರ್ಷದ ಹಬ್ಬದ ಅವಧಿಯಲ್ಲಿ 10 ಲಕ್ಷ ಪ್ರಯಾಣಿಕ ವಾಹನ ಮಾರಾಟ ನಿರೀಕ್ಷೆ

Published 13 ಆಗಸ್ಟ್ 2023, 16:10 IST
Last Updated 13 ಆಗಸ್ಟ್ 2023, 16:10 IST
ಅಕ್ಷರ ಗಾತ್ರ

ನವದೆಹಲಿ: ಈ ವರ್ಷದ ಹಬ್ಬದ ಅವಧಿಯಲ್ಲಿ ಪ್ರಯಾಣಿಕ ವಾಹನಗಳ ದೇಶಿ ಮಾರಾಟವು 10 ಲಕ್ಷವನ್ನು ದಾಟುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಇಂಡಿಯಾದ ಮಾರುಕಟ್ಟೆ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಾಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ಒಟ್ಟಾರೆ ಬೇಡಿಕೆ ಉತ್ತಮವಾಗಿದೆ. ಅದರಲ್ಲಿಯೂ ಯುಟಿಲಿಟಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮಾರಾಟ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಆಗಸ್ಟ್‌ 17ರಿಂದ ನವೆಂಬರ್ 14ರವರೆಗೆ ಹಬ್ಬದ ಅವಧಿಯು ಇರಲಿದೆ. ವರ್ಷದ ಒಟ್ಟು ಮಾರಾಟದಲ್ಲಿ ಹಬ್ಬದ ಅವಧಿ ಮಾರಾಟದ ಪ್ರಮಾಣವು ಶೇ 22ರಿಂದ ಶೇ 26ರವರೆಗೆ ಇರುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು 40 ಲಕ್ಷ ಆಗುವ ಅಂದಾಜು ಮಾಡಲಾಗಿದ್ದು, ಹಬ್ಬದ ಅವಧಿಯ ಮಾರಾಟವು 10 ಲಕ್ಷ ಆಗುವ ನಿರೀಕ್ಷೆ ಇದೆ ಎಂದಿದ್ದಾರೆ.

ವಾಹನ ಸಾಲದ ಬಡ್ಡಿದರವು ಗರಿಷ್ಠ ಮಟ್ಟದಲ್ಲಿ ಇರುವುದು ಆತಂಕಕಾರಿ ವಿಷಯವಾಗಿದೆ. ಏಕೆಂದರೆ ಕಾರು ಖರೀದಿಸುವವರಲ್ಲಿ ಶೇ 83ರಷ್ಟು ಮಂದಿ ಸಾಲ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT