ಮಂಗಳವಾರ, ಮೇ 24, 2022
31 °C

ಸ್ಕೋಡಾ ಹೊಸ ಮಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಪಿಎಸ್‌ ಮೋಟರ್ಸ್ ಕಂಪನಿಯು ನಗರದಲ್ಲಿ ಸ್ಕೋಡಾ ಕಾರುಗಳ ಎರಡನೆಯ ಮಳಿಗೆಯನ್ನು ಆರಂಭಿಸಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಸ್ಕೋಡಾ ಮುಂದಾಗಿದೆ.

ಹೊಸ ಮಳಿಗೆಯು ವಿಮಾನ ನಿಲ್ದಾಣ ರಸ್ತೆಯ, ಯಲಹಂಕ ಹೋಬಳಿಯ, ಜಕ್ಕೂರು ‍ಪ್ಲಾಂಟೇಷನ್‌ ವಿಲೇಜ್‌ನಲ್ಲಿದೆ. ಐದು ಸಾವಿರ ಚದರ ವಿಸ್ತೀರ್ಣದ ಈ ಮಳಿಗೆಯಲ್ಲಿ ಆರು ಕಾರುಗಳನ್ನು ಇರಿಸುವಷ್ಟು ಸ್ಥಳಾವಕಾಶ ಇದೆ.

ಕಂಪನಿಯು ನಗರದ ಹೆಣ್ಣೂರು ರಸ್ತೆಯಲ್ಲಿ ಕಾರ್ಯಾಗಾರವೊಂದನ್ನು ಕೂಡ ಆರಂಭಿ
ಸಿದೆ. ಇದು 30 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಇದ್ದು, ಪ್ರತಿ ತಿಂಗಳು ಗರಿಷ್ಠ ಒಂದು ಸಾವಿರ ಕಾರುಗಳ ಸರ್ವಿಸಿಂಗ್‌ ಅಗತ್ಯತೆಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

‘ನಾವು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಸೇವೆ ಒದಗಿಸಲು ನಮ್ಮ ಜಾಲವನ್ನು ವಿಸ್ತರಿಸಲು ನಿರಂತರವಾಗಿ ಯತ್ನಿಸುತ್ತಲೇ ಇರುತ್ತೇವೆ’ ಎಂದು ಸ್ಕೋಡಾ ಆಟೊ ಇಂಡಿಯಾ ಬ್ರ್ಯಾಂಡ್‌ ನಿರ್ದೇಶಕ ಜಾಕ್‌ ಹಾಲ್ಲಿಸ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.