ಬುಧವಾರ, ಅಕ್ಟೋಬರ್ 28, 2020
20 °C

ವಾಹನ ಮಾರಾಟ: ಪರಿಷ್ಕೃತ ಅಂದಾಜು ನೀಡಿದ ಇಂಡ್‌–ರಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಸಾರ್ವಜನಿಕರು ಸ್ವಂತ ವಾಹನ ಬಳಕೆಗೆ ಆದ್ಯತೆ ನೀಡುತ್ತಿರುವುದರಿಂದ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಹನ ಮಾರಾಟ ಕುರಿತು ತಾನು ಈ ಹಿಂದೆ ನೀಡಿದ್ದ ಅಂದಾಜನ್ನು ಪರಿಷ್ಕರಿಸಿರುವುದಾಗಿ ಇಂಡಿಯಾ ರೇಟಿಂಗ್ಸ್‌ (ಇಂಡ್‌–ರಾ) ಮಂಗಳವಾರ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಹನ ಮಾರಾಟ ಶೇಕಡ 22–25ರಷ್ಟು ಇಳಿಕೆ ಆಗಬಹುದು ಎಂದು ಅದು ಈ ಹಿಂದೆ ಹೇಳಿತ್ತು. ಆದರೆ, ಸದ್ಯದ ಬೇಡಿಕೆಯನ್ನು ಗಮನಿಸಿದರೆ ಶೇ 20 ರಿಂದ ಶೇ 25ರಷ್ಟು ಇಳಿಕೆಯಾಗಲಿದೆ ಎಂದು ಹೇಳಿದೆ.

ವಾಹನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಅಥವಾ ಉತ್ತೇಜನ ಆಧಾರಿತ ಗುಜರಿ ನೀತಿ ಪ್ರಕಟಿಸಿದರೆ ಅದರಿಂದ ಮಧ್ಯಮಾವಧಿಗೆ ವಾಹನಗಳ ಬೇಡಿಕೆಯಲ್ಲಿ ಸುಧಾರಣೆ ಕಂಡುಬರುವ ಸಾಧ್ಯತೆ ಇದೆ ಎಂದು ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವೈರಾಣು‌ ಹರಡುವುದು ಹೆಚ್ಚಾದರೆ ಆರ್ಥಿಕ ಚೇತರಿಕೆಗೆ ಮೇಲೆ ಅಡ್ಡ ಪರಿಣಾಮ ಉಂಟುಮಾಡಬಹದು ಎಂದು ಅದು ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.