ಭಾನುವಾರ, ಆಗಸ್ಟ್ 9, 2020
21 °C

ಸುಧಾರಿತ ಹೋಂಡಾ ಡಬ್ಲ್ಯುಆರ್‌–ವಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ತನ್ನ ಕಾಂಪ್ಯಾಕ್ಟ್‌ ಎಸ್‌ಯುವಿ ‘ಡಬ್ಲ್ಯುಆರ್‌–ವಿ’ನ  ಸುಧಾರಿತ ಆವೃತ್ತಿ  ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 8.5 ಲಕ್ಷದಿಂದ ₹ 11 ಲಕ್ಷದವರೆಗೆ ಇದೆ. ಇದು ಬಿಎಸ್‌6 ಮಾನದಂಡಕ್ಕೆ ಪೂರಕವಾಗಿದ್ದು, ಡೀಸೆಲ್‌ ಮತ್ತು ಪೆಟ್ರೋಲ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. 1.2 ಲೀಟರಿನ ಪೆಟ್ರೋಲ್‌ ಎಂಜಿನ್‌ ಬೆಲೆ ₹ 8.5 ಲಕ್ಷದಿಂದ ₹ 9.7 ಲಕ್ಷ ಇದೆ. ಸುಧಾರಿತ 5 ಸ್ಪೀಡ್‌ ಮ್ಯಾನುಯಲ್ ಟ್ರಾನ್ಸ್‌ಮಿಷನ್‌ ಹೊಂದಿದ್ದು, ಪರೀಕ್ಷೆ ವೇಳೆ ಪ್ರತಿ ಲೀಟರಿಗೆ 16.5 ಕಿ.ಮೀ ಇಂಧನ ದಕ್ಷತೆ ಹೊಂದಿದೆ ಎಂದು ಕಂಪನಿ ತಿಳಿಸಿದೆ.

1.5 ಲೀಟರಿನ ಡೀಸೆಲ್‌ ಎಂಜಿನ್‌ 100 ಪಿಎಸ್‌ ಶಕ್ತಿ ಉತ್ಪಾದಿಸಬಲ್ಲದು. 6 ಸ್ಪೀಡ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಹೊಂದಿದ್ದು, ಪ್ರತಿ ಲೀಟರಿಗೆ 23.7 ಕಿ.ಮೀ ಇಂಧನ ದಕ್ಷತೆ ಹೊಂದಿದೆ. ಬೆಲೆ ₹ 9.8 ಲಕ್ಷದಿಂದ ₹ 11 ಲಕ್ಷದವರೆಗೆ ಇದೆ.

ಹೊಸ ಎಲ್‌ಇಡಿ ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ ವಿತ್‌ ಡೇಟೈಮ್‌ ರನ್ನಿಂಗ್‌ ಲೈಟ್ಸ್‌, 16 ಇಂಚ್‌ ಅಲೋಯ್‌ ವೀಲ್ಸ್‌ ಸೇರಿದಂತೆ ಇನ್ನೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕಂಪನಿಯು ಇದುವರೆಗೆ ದೇಶದಲ್ಲಿ ಈ ಮಾದರಿಯ 1 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ.

‘ಗ್ರಾಹಕರಿಗೆ ಹತ್ತಿರವಾಗುವ ಉತ್ಪನ್ನಗಳನ್ನು ಒದಗಿಸುವಲ್ಲಿ ನಾವು ನಿರಂತರವಾಗಿ ಕಾರ್ಯೋನ್ಮುಖರಾಗಿದ್ದೇವೆ. ಹಲವು ಫೀಚರ್‌ಗಳನ್ನು ಒಳಗೊಂಡಿರುವ ಹೊಸ ಡಬ್ಲ್ಯುಆರ್‌–ವಿ  ಗ್ರಾಹಕರಿಗೆ ಇಷ್ಟವಾಗುವ ವಿಶ್ವಾಸವಿದೆ’ ಎಂದು ಕಂಪನಿಯ ಅಧ್ಯಕ್ಷ ಗಾಕು ನಕನಿಶಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು