ಬುಧವಾರ, ಮೇ 18, 2022
25 °C

ಹುಂಡೈ: ಮಾರಾಟದಲ್ಲಿ ಶೇ 5 ರಷ್ಟು ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಏಪ್ರಿಲ್‌ನಲ್ಲಿ ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ 5 ರಷ್ಟು ಕುಸಿತ ಕಂಡು ಬಂದಿದೆ.

ಈ ಬಗ್ಗೆ ಭಾನುವಾರ ‍ಪ್ರಕಟಣೆ ನೀಡಿರುವ ಹುಂಡೈ, ಕಳೆದ ಏಪ್ರಿಲ್‌ನಲ್ಲಿ 56,201 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷ ಇದೇ ಏಪ್ರಿಲ್‌ನಲ್ಲಿ 59,203 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದೆ.

ಏಪ್ರಿಲ್‌ನಲ್ಲಿ ದೇಶಿಯ ಮಾರಾಟವೂ ಕೂಡ ಶೇ 10 ರಷ್ಟು ಕುಸಿತವಾಗಿದೆ. ಈ ಏಪ್ರಿಲ್‌ನಲ್ಲಿ 44,001 ವಾಹನಗಳು ಮಾರಾಟವಾಗಿದ್ದರೆ, ಕಳೆದ 2021 ರ ಏಪ್ರಿಲ್‌ನಲ್ಲಿ 49,002 ವಾಹನಗಳು ಮಾರಾಟ ಆಗಿದ್ದವು.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ವಾಹನಗಳ ರಪ್ತು ಈ ಏಪ್ರಿಲ್‌ನಲ್ಲಿ ಹೆಚ್ಚಳವಾಗಿದೆ. ಅಂದರೆ 12,200 ವಾಹನಗಳನ್ನು ರಪ್ತು ಮಾಡಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 10,201 ವಾಹನಗಳನ್ನು ರಪ್ತು ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು