ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪ್ಲೇನ್‌ನಿಂದ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಅಭಿವೃದ್ಧಿ

Published 28 ಏಪ್ರಿಲ್ 2024, 15:23 IST
Last Updated 28 ಏಪ್ರಿಲ್ 2024, 15:23 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸಲು ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ (ನವೋದ್ಯಮ) ಇಪ್ಲೇನ್‌ ಕಂಪನಿ ನಿರ್ಧರಿಸಿದೆ. ‌

ನಗರ ಪ್ರದೇಶದಲ್ಲಿನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಈ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದೆ.

‘ಎಲೆಕ್ಟ್ರಿಕ್‌ ವರ್ಟಿಕಲ್‌ ಟೇಕ್‌ಆಫ್‌ ಮತ್ತು ಲ್ಯಾಂಡಿಂಗ್‌ (ಇವಿಟಿಒಎಲ್‌) ಏರ್‌ಕ್ರಾಫ್ಟ್‌ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೂರು ಅಥವಾ ನಾಲ್ಕು ಆಸನ ಸಾಮರ್ಥ್ಯವಿರುವ ಏರ್‌ ಆಂಬುಲೆನ್ಸ್‌ ಆಗಿಯೂ ಇದನ್ನು ಮಾರ್ಪಡಿಸಬಹುದಾಗಿದೆ’ ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಸತ್ಯ ಚಕ್ರವರ್ತಿ ತಿಳಿಸಿದ್ದಾರೆ.

ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಏರ್‌ಕ್ರಾಫ್ಟ್‌ನ ಮೂಲ ಮಾದರಿ ಸಿದ್ಧವಾಗಲಿದೆ. ಬಳಿಕ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಪ್ರಮಾಣೀಕರಣ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕಂಪನಿಯ ವೆಬ್‌ಸೈಟ್‌ನ ಮಾಹಿತಿ ಪ್ರಕಾರ, ಜನರು ಸ್ವಂತ ವಾಹನದಲ್ಲಿ 60 ನಿಮಿಷದಲ್ಲಿ ಕ್ರಮಿಸಬಹುದಾದ ದೂರವನ್ನು ಏರ್‌ಕ್ರಾಫ್ಟ್‌ ಮೂಲಕ 14 ನಿಮಿಷದಲ್ಲಿ ತಲುಪಬಹುದಾಗಿದೆ. ಅಲ್ಲದೆ, ಕಂಪನಿಯು ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಮುಂದಿನ ತಿಂಗಳಿನಿಂದ ಮಾರಾಟ ಆರಂಭವಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT