ಶನಿವಾರ, ಫೆಬ್ರವರಿ 22, 2020
19 °C

ಹೊಸ ಮಾದರಿಯ ಕಾರುಗಳನ್ನು ಪರಿಚಯಿಸಲಿದೆ ಕಿಯಾ ಮೋಟಾರ್ಸ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಿಯಾ ಮೋಟಾರ್ಸ್‌ನ ಕಾರು

ಹೈದರಾಬಾದ್‌: ದಕ್ಷಿಣ ಕೊರಿಯಾದ ಕಾರು ತಯಾರಿಕಾ ಕಂಪನಿ ಕಿಯಾ ಮೋಟಾರ್ಸ್‌ ಹೊಸ ಮಾದರಿಯ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವ ಗುರಿ ಹೊಂದಿದೆ. 'ಸೆಲ್ಟೋಸ್‌' ಈಗಾಗಲೇ ದೇಶದ ಕಾರು ಪ್ರಿಯರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಬಹುಬಳಕೆಯ ಲಕ್ಸುರಿ ಕಾರು 'ಕಾರ್ನಿವಾಲ್‌' ಹಾಗೂ ಕಾಂಪ್ಯಾಕ್ಟ್‌ ಎಸ್‌ಯುವಿ ಮಾದರಿ ಕಾರುಗಳನ್ನು ಈ ವರ್ಷ ಹೊರ ತರಲು ಸಿದ್ಧತೆ ನಡೆಸಿದೆ. ಮುಂದಿನ ವರ್ಷ ಎರಡು ಹೊಸ ಮಾದರಿ ಕಾರುಗಳನ್ನು ಅನಾವರಣಗೊಳಿಸುವುದಾಗಿ ಕಂಪನಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮಾರ್ಚ್‌ 2022ರ ವೇಳೆಗೆ 3 ಲಕ್ಷ ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. 4–5 ಮಾದರಿಯ ಕಾರುಗಳನ್ನು 2022ರ ವರೆಗೂ ತಯಾರಿಸಲು ಸಿದ್ಧತೆ ನಡೆಸಿದೆ. ಆಂಧ್ರ ಪ್ರದೇಶದಲ್ಲಿ ಕಿಯಾ ಮೋಟಾರ್ಸ್‌ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದು, ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ವರ್ಷದಲ್ಲಿ 3 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. 

ಕಾರ್ನಿವಾಲ್‌  ಕಾರು

ಪ್ರಸ್ತುತ ಎರಡು ಪಾಳಿಗಳಲ್ಲಿ ಕಾರು ತಯಾರಿಸುವ ಕಾರ್ಯ ನಡೆಯುತ್ತಿದೆ.  

ಐಷಾರಾಮಿ ಕಾರ್ನಿವಾಲ್‌

ಐಷಾರಾಮಿ ಮತ್ತು ವಿವಿಧ ರೀತಿಯ ಅವಶ್ಯಕತೆಗಳಿಗೆ ಬಳಕೆ ಮಾಡಬಹುದಾದ ಕಾರ್ನಿವಾಲ್‌ ಮಾದರಿಯ ಕಾರುಗಳ ಬಗ್ಗೆ ಕಂಪನಿ ಭರವಸೆ ವ್ಯಕ್ತಪಡಿಸಿದೆ. ದೇಶದ ಮಾರುಕಟ್ಟೆಯಲ್ಲಿ ಕಾರ್ನಿವಾಲ್‌ ರೀತಿಯ ಬೇರೆ ಯಾವುದೇ ಕಂಪನಿಗಳ ಕಾರು ಇಲ್ಲದ ಕಾರಣ, ಹೊಸ ಗ್ರಾಹಕರನ್ನು ಸೆಳೆಯುವ ಯೋಜನೆ ಹೊಂದಿದೆ. 

ಸ್ಲೈಡಿಂಗ್‌ ಡೋರ್‌ ಒಳಗೊಂಡ ಕಾರ್ನಿವಾಲ್‌ 2.2 ಲೀಟರ್‌ ಡೀಸೆಲ್‌ ಎಂಜಿನ್‌ ಹೊಂದಿರಲಿದ್ದು, ಪ್ರತಿ ಲೀಟರ್‌ ಡೀಸೆಲ್‌ಗೆ 13.9 ಕಿ.ಮೀ. ಇಂಧನ ದಕ್ಷತೆ ಹೊಂದಿದೆ. ಬಿಎಸ್‌–6 ಗುಣಮಟ್ಟದ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಕಂಪನಿ ಹೇಳಿದೆ. 

ಕಿಯಾ ಮೋಟಾರ್ಸ್‌ ಈಗಾಗಲೇ ದೇಶದ 160 ನಗರಗಳಲ್ಲಿ 265 ಮಾರಾಟ ಕೇಂದ್ರಗಳನ್ನು ಆರಂಭಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು