ಭಾನುವಾರ, ನವೆಂಬರ್ 17, 2019
25 °C

ಮಾರುತಿಯ ಆಯ್ದ ಕಾರುಗಳ ಎಕ್ಸ್‌ ಷೊರೂಂ ಬೆಲೆ ₹ 5 ಸಾವಿರದವರೆಗೆ ಇಳಿಕೆ

Published:
Updated:

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಬುಧವಾರದಿಂದಲೇ ಜಾರಿಗೆ ಬರುವಂತೆ ತನ್ನ ಕೆಲವು ಮಾದರಿಗಳ ಎಕ್ಸ್‌ ಷೋರೂಂ ಬೆಲೆಯಲ್ಲಿ ₹ 5 ಸಾವಿರದವರೆಗೂ ಇಳಿಕೆ ಮಾಡಿದೆ.

ಆಲ್ಟೊ 800, ಆಲ್ಟೊ ಕೆ10, ವಿತಾರಾ ಬ್ರೇಜಾ, ಎಸ್‌ ಕ್ರಾಸ್‌, ಇಗ್ನಿಸ್‌,  ಡೀಸೆಲ್‌ ಎಂಜಿನ್‌ನ ಸ್ಪಿಫ್ಟ್‌, ಬಲೆನೊ, ಡಿಸೈರ್‌, ಟೂರ್‌ ಎಸ್‌ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿರುವುದಾಗಿ ತಿಳಿಸಿದೆ.

ಈ ಮಾದರಿಗಳ ಬೆಲೆ ₹ 2.93 ಲಕ್ಷದಿಂದ ₹ 11.49 ಲಕ್ಷದವರೆಗಿದೆ.

ಬೆಲೆಯಲ್ಲಿ ಇಳಿಕೆ ಮಾಡಿರುವುದರಿಂದ ಆರಂಭಿಕ ಹಂತದ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಅನುಕೂಲ ಆಗಲಿದೆ. ಹಬ್ಬದ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಂಡಿರುವುದರಿಂದ ಬೇಡಿಕೆ ಸೃಷ್ಟಿಗೂ ನೆರವಾಗಲಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತ ಮಾಡಿದ ಬಳಿಕ ವಾಹನಗಳ ಬೆಲೆ ಇಳಿಕೆ ನಿರ್ಧಾರ ಪ್ರಕಟಿಸಿರುವ ಮೊದಲ ಕಂಪನಿ ಇದಾಗಿದೆ.

ಪ್ರತಿಕ್ರಿಯಿಸಿ (+)