ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಹಬ್ಬದ ಸಂದರ್ಭದಲ್ಲಿ 5.4 ಲಕ್ಷ ವಾಹನಗಳ ಮಾರಾಟ: ಎಫ್‌ಎಡಿಎ

2019ರ ಬಳಿಕ ದಾಖಲೆಯ ಮಾರಾಟ: ಎಫ್‌ಎಡಿಎ
Last Updated 10 ಅಕ್ಟೋಬರ್ 2022, 13:49 IST
ಅಕ್ಷರ ಗಾತ್ರ

ನವದೆಹಲಿ: ಸೆಪ್ಟೆಂಬರ್‌ 26ರಿಂದ ಅಕ್ಟೋಬರ್ 5ರವರೆಗಿನ ನವರಾತ್ರಿ ಹಬ್ಬದ ಸಂದರ್ಭದಲ್ಲಿ 5.4 ಲಕ್ಷ ವಾಹನಗಳು ಮಾರಾಟ ಆಗಿದ್ದು, ಇದೊಂದುದಾಖಲೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.

ಕಳೆದ ವರ್ಷದ ನವರಾತ್ರಿ ಸಂದರ್ಭದಲ್ಲಿ 3.42 ಲಕ್ಷ ವಾಹನಗಳು ಮಾರಾಟ ಆಗಿದ್ದವು. ಇದಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇಕಡ 57ರಷ್ಟು ಏರಿಕೆ ಕಂಡುಬಂದಿದೆ ಎಂದು ಹೇಳಿದೆ. 2019ರ ನವರಾತ್ರಿ ಸಂದರ್ಭದಲ್ಲಿ 4.66 ಲಕ್ಷ ವಾಹನಗಳು ಮಾರಾಟ ಆಗಿದ್ದು ಇದುವರೆಗಿನ ದಾಖಲೆಯಾಗಿತ್ತು.

ಮೂರು ವರ್ಷಗಳ ಬಳಿಕ ಗ್ರಾಹಕರು ವಾಹನ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಎನ್ನುವುದನ್ನು ನವರಾತ್ರಿ ಸಂದರ್ಭದ ಮಾರಾಟದ ಅಂಕಿ–ಅಂಶವು ತಿಳಿಸುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಮನಿಶ್‌ ರಾಜ್‌ ಸಿಂಘಾನಿಯಾ ಹೇಳಿದ್ದಾರೆ.

ಕೋವಿಡ್‌ಗೂ ಮುಂಚಿನ ತಿಂಗಳುಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನ ಮಾರಾಟ ಸಹ ಒಂದಂಕಿ ಪ್ರಗತಿ ಕಂಡಿದೆ ಎಂದು ಅವರು ತಿಳಿಸಿದ್ದಾರೆ. ವಾಹನಗಳ ಮಾರಾಟದ ಈಗಿನ ಮಟ್ಟವು ದೀಪಾವಳಿಯವರೆಗೂ ಮುಂದುವರಿಯುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

ಮಾರಾಟದ ವಿವರ

ವಾಹನ;2021;2022;ಏರಿಕೆ (%)

ಪ್ರಯಾಣಿಕ ವಾಹನ;64,850;1,10,521;70.43

ದ್ವಿಚಕ್ರ;2,42,213;3,69,020;52.35

ತ್ರಿಚಕ್ರ;9,203;19,809;73

ವಾಣಿಜ್ಯ ವಾಹನ;15,135;22,437;48.25

ಟ್ರ್ಯಾಕ್ಟರ್;11,062;17,440;57.66

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT