ಭಾನುವಾರ, ಅಕ್ಟೋಬರ್ 25, 2020
23 °C

ಮುಂದಿನ ವರ್ಷ ಭಾರತಕ್ಕೆ ಟೆಸ್ಲಾ?

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೆರಿಕ ಮೂಲದ ವಿದ್ಯುತ್ ಚಾಲಿತ ಕಾರುಗಳ ತಯಾರಿಕಾ ಕಂಪನಿ ಟೆಸ್ಲಾ, ಭಾರತದ ಮಾರುಕಟ್ಟೆಗೆ 2021ರಲ್ಲಿ ಲಗ್ಗೆ ಇಡಬಹುದು ಎಂಬ ಸೂಚನೆಯನ್ನು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಇಲಾನ್ ಮಸ್ಕ್ ಅವರು ಶುಕ್ರವಾರ ನೀಡಿದ್ದಾರೆ.

‘ಇಂಡಿಯಾ ವಾಂಟ್ಸ್ ಟೆಸ್ಲಾ’ (ಭಾರತಕ್ಕೆ ಟೆಸ್ಲಾ ಬೇಕು) ಎಂಬ ಬರಹ ಇರುವ ಟಿ–ಶರ್ಟ್‌ ಧರಿಸಿದ ಚಿತ್ರದ ಜೊತೆ ಅವರು ‘ಮುಂದಿನ ವರ್ಷ ಖಚಿತ’ ಎಂದು ಟ್ವೀಟ್ ಮಾಡಿದ್ದಾರೆ. ‘ಕಾಯುತ್ತಿರುವುದಕ್ಕೆ ಧನ್ಯವಾದ’ ಎಂದೂ ಬರೆದಿದ್ದಾರೆ.

ಕೇಂದ್ರ ಸರ್ಕಾರವು ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಸಂದರ್ಭದಲ್ಲೇ ಟೆಸ್ಲಾ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು