ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೆಚ್ಚು ಬಿಕರಿಯಾಗುತ್ತಿರುವ ಕಮ್ಯೂಟರ್ ಬೈಕ್ಗಳ ವಿಭಾಗಕ್ಕೆ ‘ಟಿವಿಎಸ್ ರೆಡಿಯನ್’ ಬೈಕ್ ಸೇರ್ಪಡೆಯಾಗಿದ್ದು, ತನ್ನ ಹೊಸ ಆಯ್ಕೆಯಿಂದಲೇ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.

ಈ ಬೈಕ್ ಗ್ರಾಮೀಣ ಮತ್ತು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಬಲ್ಲ ವಿನೂತನ ಮಾದರಿಯಲ್ಲಿ ವಿನ್ಯಾಸಗೊಂಡಿದ್ದು, ರೆಟ್ರೋ ಶೈಲಿಯಿಂದ ಕಂಗೊಳ್ಳಿಸುತ್ತಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವಿನ್ಯಾಸದ ಬೈಕ್ನ್ನು ಟಿವಿಎಸ್ ಅಭಿವೃದ್ಧಿ ಪಡಿಸಿದ್ದು, ಆಟೋ ಮೊಬೈಲ್ ಕ್ಷೇತ್ರದಲ್ಲಿಯೇ ಹೊಸ ಮನ್ವಂತರ ಸೃಷ್ಟಿಸಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಕಮ್ಯೂಟರ್ ವಿಭಾಗದಲ್ಲಿ ಹೊಸ ಬದಲಾವಣೆ ತರಲು ಹೊರಟಿರುವ ಟಿವಿಎಸ್ ಸಂಸ್ಥೆಯೂ ರೆಡಿಯನ್ ಬೈಕ್ಗೆ 110ಸಿಸಿ ಎಂಜಿನ್ ಅಳವಡಿಸಿದ್ದು. ₹48,400 (ದೆಹಲಿ ಎಕ್ಸ್ಶೋರೂಂ) ಬೆಲೆ ನಿಗದಿಗೊಳಿಸಿದೆ.

ಈ ಬೈಕ್ನಲ್ಲಿ ಒದಗಿಸಲಾಗಿರುವ ಆಕರ್ಷಕ ಸೌಲಭ್ಯಗಳು ಮೊದಲ ನೋಟದಲ್ಲಿಯೇ ಗ್ರಾಹಕರನ್ನು ಸೆಳೆಯದೇ ಇರಲಾರವು.

ರೆಟ್ರೊ ಲುಕ್ನೊಂದಿಗೆ ಕ್ಲಾಸಿಕ್ ಟಚ್: ಬೈಕಿನ ವಿನ್ಯಾಸದಲ್ಲಿ ಸ್ಟೈಲಿಷ್ ಕ್ರೋಮ್ ಅಸೆಂಟ್ಸ್, ಶಕ್ತಿಶಾಲಿ ಹೆಡ್ಲ್ಯಾಂಪ್, ಕ್ರೋಮ್ ಬೆಜೆಲ್, ಬೆಳಗಿನ ಸಮಯದಲ್ಲಿ ಉರಿಯುವ ಎಲ್ಇಡಿ ಲೈಟ್, ಇಂಧನ ಟ್ಯಾಂಕ್ ಮೇಲ್ಭಾಗದಲ್ಲಿ ಪಾಡ್ ಸೌಲಭ್ಯ, ಕ್ರೋಮ್ ಪ್ರೇರಿತ ಇನ್ಸ್ಟುಮೆಂಟಲ್ ಕ್ಲಸ್ಟರ್ ಸೌಲಭ್ಯಗಳು ಮತ್ತು ಹಿಂಬದಿಯ ಲೆಗೇಜ್ ಕ್ಯಾರಿಯರ್ ಬೈಕಿಗೆ ಕ್ಲಾಸಿಕ್ ಟಚ್ ನೀಡಿವೆ.

ಎಲ್ಲವೂ ಸ್ಮಾರ್ಟ್ ಸವಾರಿ ಸ್ಮೂತ್: ಎಲ್ಲ ರಸ್ತೆಗಳಿಗೂ ಹೊಂದುವಂತೆ ರೆಡಿಯಾನ್ ಬೈಕ್ಗಳಿಗೆ 180 ಎಂ.ಎಂ ಗ್ರೌಂಡ್ ಕ್ಲಿಯೆರೆನ್ಸ್ ಇದ್ದು, ಸೈಡ್ ಸ್ಟ್ಯಾಂಡ್ ಹಾಕಿದ್ದರೇ ಎಚ್ಚರಿಕೆ ನೀಡುವ ಇಂಡಿಕೇಟರ್ ಇರಲಿದೆ. ಈ ಬೈಕ್ 1265 ಎಂ.ಎಂ ಎತ್ತರ ಇದ್ದು, 18 ಇಂಚಿನ ಅಲಾಯ್ ಚಕ್ರಗಳು ವೇಗಕ್ಕೆ ಸರಾಗಗೊಳ್ಳಿಸಲಿದೆ. ಗ್ರಿಪ್ ಟೈರ್ಗಳು ದೂರದ ಸವಾರಿಗೆ ಹಿಡಿತ ನೀಡಿದರೆ, ಸ್ಮಾರ್ಟ್ ಚಾರ್ಜಿಂಗ್ ವ್ಯವಸ್ಥೆ ಮೊಬೈಲ್ ಬ್ಯಾಟರಿಗೆ ಬಲ ತುಂಬುತ್ತದೆ. ಆಕರ್ಷಕ ಸೀಟಿನ ವ್ಯವಸ್ಥೆ ಇದೆ.

ಎಂಜಿನ್ ಸಾಮರ್ಥ್ಯ: ಈ ಬೈಕ್ನಲ್ಲಿ 109,7 ಸಿಸಿಯ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಇದ್ದು, 8.2 ಬಿಎಚ್ಪಿ ಮತ್ತು 8.7 ಎನ್ಎಂ ಟಾರ್ಕ್ ಉತ್ಪಾದಿಸುವಷ್ಟು ಶಕ್ತವಾಗಿದೆ. 4 ಸ್ಪೀಡ್ ಗೇರ್ಬಾಕ್ಸ್ನೊಂದಿಗೆ 10 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಇದೆ. ಕಮ್ಯೂಟರ್ ಬೈಕ್ ವಿಭಾಗದಲ್ಲೇ ಅತ್ಯುತ್ತಮ ಎನ್ನಿಸುವಷ್ಟು ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್ಗೆ 69.3 ಕಿ.ಮೀ ದೂರ ಸಾಗಬಹುದಾಗಿದೆ.

ಸ್ಕಿಡ್ ಆಗುವುದಕ್ಕೆ ಅವಕಾಶವೇ ಇಲ್ಲ: ಕಮ್ಯೂಟರ್ ವಿಭಾಗದ ಬೈಕ್ಗಳಲ್ಲಿ ಬ್ರೇಕ್ ಅಪ್ಲೈ ಮಾಡಿದಕ್ಷಣ ಸ್ಕಿಡ್ (ಜಾರುವುದು) ಆಗುತ್ತದೆ ಎಂಬ ಆರೋಪ ಗ್ರಾಹಕರಿಂದ ಕೇಳಿ ಬರುತ್ತದೆ. ಇದಕ್ಕೆ ಸಂಪೂರ್ಣ ಬ್ರೇಕ್ ಹಾಕಿರುವ ಟಿವಿಎಸ್ ರೆಡಿಯನ್ ಬೈಕ್ಗಳಲ್ಲಿ ‘ಸಿಂಕ್ರೊನೈಸ್ಡ್’ ಬ್ರೇಕಿಂಗ್ ಟೆಕ್ನಾಲಜಿಯನ್ನು ಅಳವಡಿಸಿಕೊಂಡಿದೆ.

ಬೈಕಿನ ಎರಡು ಚಕ್ರಗಳಲ್ಲೂ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದ್ದು, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫ್ರೋಕ್ಸ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ (5 ಹಂತದಲ್ಲಿ ಹೊಂದಾಣಿಕೆ) ಮಾಡಿಕೊಳ್ಳಬಹುದಾದ ಹೈಡ್ರಾಲಿಕ್ ಸಸ್ಷೆನ್ ನೀಡಲಾಗಿದೆ.

ನಾಲ್ಕು ವರ್ಣಗಳಲ್ಲಿ ಲಭ್ಯ: ವೈಟ್, ಬೀಜ್, ಪರ್ಪಲ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಈ ಬೈಕ್ ಖರೀದಿಗೆ ಲಭ್ಯವಿದ್ದು, ಗರಿಷ್ಠ 5 ವರ್ಷಗಳ ವಾರಂಟಿ ದೊರೆಯಲಿದೆ.

ಒಟ್ಟಿನಲ್ಲಿ ಕ್ಲಾಸಿಕ್ ಸ್ಟೈಲ್ನಲ್ಲಿ ಸಿದ್ದವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಿವಿಎಸ್ ರೆಡಿಯನ್ ಬೈಕ್ಗಳು ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಎಲ್ಲ ಗುಣಗಳನ್ನು ಹೊಂದಿದ್ದು, ಮೈಲೇಜ್ ವಿಚಾರವಾಗಿ ಉತ್ತಮ ಎನ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.